Showing posts with label ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರು hayavadana. Show all posts
Showing posts with label ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರು hayavadana. Show all posts

Wednesday, 1 September 2021

ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರು ankita hayavadana

..

ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರು ಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ.


ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1


ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2


ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3


ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4


ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5


ಬಾಲ ಧ್ರುವನಿಗೆ ಯಾರು ಶೀಲವನು ಕಲಿಸಿದರುತ್ರೈಲೋಕವೀರ ಪಾರ್ಥನ ತಿದ್ದಿದವರಾರುಆಲಸ್ಯವಿಲ್ಲದೆ ಎಲ್ಲವ ಬಲ್ಲ ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6


ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7

***