Showing posts with label ಹರಿದಿನ ಪಾತಕ ಪರಿಹಾರ ದನುಜರ shree krishna. Show all posts
Showing posts with label ಹರಿದಿನ ಪಾತಕ ಪರಿಹಾರ ದನುಜರ shree krishna. Show all posts

Friday, 20 December 2019

ಹರಿದಿನ ಪಾತಕ ಪರಿಹಾರ ದನುಜರ ankita shree krishna

ಹರಿದಿನ ಪಾತಕ ಪರಿಹಾರ ದನುಜರ
ಕರುಣಕ್ಕೆ ಕಾರಣ ನಂಬೆಲೊ ಮನುಜ ||pa||

ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ
ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ ||1||

ಹಿಂದೆ ಮಾಡಿದ ಪಾಪ ಪರಿಹಾರವು ನೀ-ನಿಂದು ಮಾಡುವ ಸುಕೃತ ಬೆಳಸು
ಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ ||2||

ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವ
ಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ ||3||
*******