Showing posts with label ನಿನ್ನ ಮಗನೇನೇ ನಂದಗೋಪರಾಣಿ ಇನ್ನು ಇಂಥ ಚಪಲ ಚಿಕ್ಕವನ ಕಾಣೆ rukmesha. Show all posts
Showing posts with label ನಿನ್ನ ಮಗನೇನೇ ನಂದಗೋಪರಾಣಿ ಇನ್ನು ಇಂಥ ಚಪಲ ಚಿಕ್ಕವನ ಕಾಣೆ rukmesha. Show all posts

Thursday, 5 August 2021

ನಿನ್ನ ಮಗನೇನೇ ನಂದಗೋಪರಾಣಿ ಇನ್ನು ಇಂಥ ಚಪಲ ಚಿಕ್ಕವನ ಕಾಣೆ ankita rukmesha

 ..

kruti by rukmangadaru

ನಿನ್ನ ಮಗನೇನೇ ನಂದಗೋಪರಾಣಿ |ಇನ್ನು ಇಂಥ ಚಪಲ ಚಿಕ್ಕವನ ಕಾಣೆ ಪ


ಗೊಲ್ಲರಿಗೆ ತಕ್ಕ ತನಯನಿವನಲ್ಲ |ಎಲ್ಲೆಲ್ಲಿಲ್ಲದಂಥ ನಡೆನುಡಿಯ ಬಲ್ಲ 1

ವಾವಿಲ್ಲದವನ ಸಂಗ ಭಂಗ ಮಳೆ ನಮ್ಮ |ನಾವಿಲ್ಲಿಹುದಿನ್ನು ನಿತ್ಯಲ್ಲ ಕಾಣಮ್ಮ 2

ಕಣ್ಣಲೆ ಎಲ್ಲರ ಮನವ ಕದ್ದು ಕದಡುವನು |ಕಣ್ಣಲಿಳ್ಳೀ ಕಟ್ಟಿಸಿ ಮೊಗವನು ಗಿರುವವನು 3

ಮಾರನ ಸಖನಾಗಿ ಹೇಮಗ ತಿರುಗುವವನು |ದೂರ ಬಂದವರಿಗಿಲ್ಲ ದರ ದೂರಾಗಿಹನು 4

ನಕ್ಕು ಮುದ್ದಿಸಿ ನಮ್ಮ ಸೊಕ್ಕು ತಗ್ಗಿಸುವನು |ರುಕ್ಮದಂತೆ ನಾನಾಕಾರ ಧರಿಸುವವನು 5

***