Showing posts with label ಪಾಲಿಸೋ ವನಮಾಲಿ ಮುಂದೆನ್ನ prasannavenkata. Show all posts
Showing posts with label ಪಾಲಿಸೋ ವನಮಾಲಿ ಮುಂದೆನ್ನ prasannavenkata. Show all posts

Wednesday, 13 November 2019

ಪಾಲಿಸೋ ವನಮಾಲಿ ಮುಂದೆನ್ನ ankita prasannavenkata

by ಪ್ರಸನ್ನವೆಂಕಟದಾಸರು
ಪಾಲಿಸೊ ವನಮಾಲಿ ಮುಂದೆನ್ನಬಾಲಕನಲೆಯಲೆಸದವನ ಪ.

ಹದ್ದನೇರ್ವನಿರುದ್ಧ ನಿನ್ನಲ್ಲಿಬುದ್ಧಿ ನಿಲ್ಲದು ಶುದ್ಧ ವೃತ್ತಿಲಿಮುದ್ದುಮಕ್ಕಳು ಮುಗ್ಧರಲ್ಲೆಅಯ್ಯತಧ್ಯಾನಾಲಾಪ ಬಿದ್ದದ್ದಲ್ಲಯ್ಯ 1

ತುಲಸಿ ಪುಷ್ಪಾಂಜಲಿ ತರಲಿಲ್ಲಹೊಳೆವಂಘ್ರಿಗರ್ಪಿಸಲು ಹೊತ್ತಿಲ್ಲಬಲು ಧನ ಬಹ ಕೆಲಸ ಕೈಕೊಂಡೆಕಲಿಕೂಡ ನಿರಯದ ಭೋಗುಂಡೆ 2

ಆಡುವ ಮಾತು ಮಾಡಲರಿತರಿಯೆಬೇಡುವರಿಗುಣ ನೀಡಲಿಕ್ಕರಿಯೆಖೋಡಿಗೇನುಂಟು ಸುಖ ಹೇಳು ತಂದೆಹಾಡುವೆ ನಿನ್ನ ಕಾಡುವೆನಿಂದೆ 3

ಹೆತ್ತ ತಾಯಿ ಕುತ್ತಿಗೊತ್ತಿದರಾರೊಮತ್ತೆ ತಂದೆ ಮಾರಲಿತ್ತರಿನ್ನಾರೊಪೃಥ್ವಿಪ ಸುಲಿದರೊತ್ತರೆಂಬುವರುಕರ್ತನೀನಿದ್ದೆನ್ನೆತ್ತುವರಾರು4

ಕರುಣವಾರಿಧಿ ಕರುಣಿಸು ಗಡಪರಮಭಾಗವತರಿರುವಲ್ಲೆನ್ನಿಡುಪರಸನ್ನ ವೆಂಕಟರಸ ನೀ ಬಾರೊಮರಣ ಹೊಂದದ ಅರಮನೆಗೊಯ್ಯೊ 5
*******