..
kruti by ವೀರನಾರಾಯಣ Veeranarayana
ಪರಮಮಂಗಳ ಧಾಮಾ ಶ್ರೀರಾಮಾ ಪ
ಕರುಣಾಮೃತ ಸಾಗರ ನಿಸ್ಸೀಮಾಚರಣಕೆರಗುವೆ ಸಾಸಿರನಾಮಾ 1
ಶರಣಾಗತರನು ಕರವಿಡಿವುದು ನೇಮಾಶರಣುಬಂದೆನಯ್ಯ ರಘುಕುಲ ಸೋಮಾ 2
ವಚನವ ಪಾಲಿಪ ಸುಚರಿತವೈ ನಿಮ್ಮಅಚಲ ಭಕ್ತಿಕೊಡು ಮೇಘಶ್ಯಾಮಾ 3
ಗದುಗಿನ ವೀರನಾರಾಯಣ ಪ್ರೇಮ ವೊದಗಿಸಿ ಕಾಯೋ ವೀರ ಲಲಾಮಾ 4
***