..
ಲಾಭವಹುದು ಹರಿಕಥಾಮೃತ ಪ
ಪದುಮನಾಭನ ಪದದ ಪಥದಿಅಹುದು ಸಜ್ಜನಗಣಕೆ ಸತ್ಯ ಅ.ಪ
ಅರಿಷಡ್ವರ್ಗಂಗಳ ತೊರೆದುಜರಿದು ತಾಪತ್ರಯವ ಕಳೆದುಮುರಹರನ ಪದದ ಪಥದಿಇರಲು ಸಜ್ಜನ ಗಣಕೆ ಸತ್ಯ 1
ಏಳು ದಿನವು ಪರೀಕ್ಷಿತನುವೇಳೆಯರಿತು ಹರಿಯ ಕಥೆಯಕೇಳಿ ಮುಕ್ತನಾದ ಮೇಲೆಕೇಳಿದ ಕಥೆಯ ಕೇಳಬೇಕು2
ಎರಡು ಘಳಿಗೆ ಖಟ್ಟಾಂಗರಾಯಕರಣ ಪುಟದಿ ಕೃಷ್ಣನ ಕಥೆಯಸ್ಮರಿಸಿ ಮುಕ್ತನಾದ ಮೇಲೆನಿರುತ ಕಥೆಯ ಕೇಳಬೇಕು 3
***