Showing posts with label ಶ್ರೀರಂಗವಾಸಿಗಳು ಏನು ಸುಕೃತಿಗಳೊ venkatakrishna. Show all posts
Showing posts with label ಶ್ರೀರಂಗವಾಸಿಗಳು ಏನು ಸುಕೃತಿಗಳೊ venkatakrishna. Show all posts

Tuesday, 1 June 2021

ಶ್ರೀರಂಗವಾಸಿಗಳು ಏನು ಸುಕೃತಿಗಳೊ ankita venkatakrishna

 by yadugiriyamma  

ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ


ಅರುಣ ಉದಯದೊಳೆದ್ದು ಮರುದ್ವøಧೆ ಸ್ನಾನವ ಮಾಡಿ

ಪರಮಪುರುಷನ ವಿಶ್ವರೂಪ ನೋಡಿ

ಪರವಾಸುದೇವರ ಪ್ರಣವವಿಮಾನದಿ ನೋಡಿ

ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು 1


ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ

ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು

ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು

ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ 2


ಮಾರ್ಗಶಿರ ಮಾಸದಿ ಪವಿತ್ರ ಕೊ

ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ

ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು

ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು 3


ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು

ವೈಶಾಖಮಾಸದಿ ವಸಂತೋತ್ಸವವು

ಜೇಷ್ಠಮಾಸದಲಿ ಜೇಷ್ಠಾಭಿಷೇಕವು

ಆಷಾಢಮಾಸದಿ ಕಾವೇರಿ ವೈಭೋಗವು 4


ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ

ನಾಶವಾಗುವುದವರ ಪಾಪರಾಶಿಗಳು ಆ

ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ]

ವಾಸುಕಿಶಯನ ವೆಂಕಟರಂಗನ ನೋಳ್ಪರು 4

****