Showing posts with label ದಾಸಾರ್ಯರ ಚರಣ ಕಮಲಕಾನಮಿಪೆ varadesha vittala jagannatha dasa stutih. Show all posts
Showing posts with label ದಾಸಾರ್ಯರ ಚರಣ ಕಮಲಕಾನಮಿಪೆ varadesha vittala jagannatha dasa stutih. Show all posts

Sunday, 1 August 2021

ದಾಸಾರ್ಯರ ಚರಣ ಕಮಲಕಾನಮಿಪೆ ankita varadesha vittala jagannatha dasa stutih

 ..

kruti by ವರದೇಶ ವಿಠಲರು varadesha vittala dasaru

ಜಗನ್ನಾಥದಾಸರಾಯರಸ್ತೋತ್ರ


ದಾಸಾರ್ಯರ ಚರಣ ಕಮಲಕಾನಮಿಪೆ

ಶಿರಬಾಗಿ ಬಿನ್ನೈಪೆ ಏಸು ಜನ್ಮದ ದುಷ್ಕøತ ಪರಿಹರಿಪೆ

ಕರುಣವನು ಪಡೆದು ಭೂಸುರಜನ್ಮವ ಸಾರ್ಥಕಗೊಳಿಪೆ

ಕೃತಕೃತ್ಯನೆಂದೆನಿಪೆ ದೋಷರಾಶಿಗಳ ನಾಶಗೈಸಿ ವಿ

ಶೇಷ ಮಹಿಮದಿಂಭೂಷಿತ ಜಗನ್ನಾಥ ಪ


ಪ್ರಥಮ ಗಾಂಗೇಯ ವಸನಸಂಜಾತ

ಪ್ರಲ್ಹಾದನಭ್ರಾತ ಮತಿಮಾನಸಹ್ಲಾದ ಸುನಾಮಕನೀತ

ನರಹರಿಸಂಪ್ರೀತ ದ್ವಿತಿಯ ಶಲ್ಯಾಖ್ಯನೃಪತಿ ವಿಖ್ಯಾತ

ಸದ್ಗುಣ ¨sರಿತ ತೃತೀಯ ಪುರಂದರ ಸುತನೆನಿಸಿದ ದಸ

ದ್ಯತಿ ವಾದೇಶ್ವರನ್ಹಿತದಲಿ ವಲಿಸಿದ 1


ನರಸಂಬಂಧಿತ ಪ್ರಾಂತದ ಕ್ಷೇತ್ರದಲಿ ಬÁ್ಯಗವಟದ ಕರಣಿಕ

ನರಸಾರ್ಯರಗರ್ಭೋದಯ ಗಿರಿಯಲ್ಲಿ

ಜನಿಸಿದ ಬಾಲಾರ್ಕನು

ವರದೇಂದ್ರ ಗುರುವರ್ಯರ ಕರುಣದಲಿ ಶಾಸ್ತ್ರಾಖ್ಯಾಗಸದಿ

ವರವಸಂತ ಋತತÀರುಣಿ ಕಿರಣದೊಲ್ ಪರಮತಗಳ

ಧಿ:ಕರಿಸಿ ಮೆರೆಯುತಿಹ 2


ಮೂರು ಭಾಷಾತ್ಮಕ ವಿದ್ಯಾಧ್ಯಾತ್ಮ ಸಂಪಾದಿಸಲೋಸುಗ

ಮಾರಾರಿನಾಮಕದಾಮಹಾತ್ಮರಡಿಯುಗಳನು ಸೇವಿಸಿ

ಮೂರು ರೂಪಾತ್ಮಕನ ವಿಜ್ಞಾನಾತ್ಮ ಅಂಶಗಳನು ತೋರಿಪ

ಮೂರು ಮೂರು ಮೂರು ಮೂರು ಮೂರು ವಂದುಸಾರವ

ಗೃಹಿಸಿದ ಸೂರಿವರಾಗ್ರÀಣಿ 3


ವರದೇಶ ಶಾಸ್ತ್ರಾತ್ಮಕಪಯದಿಂದ ಸಂಪೂರಿತವಾದ

ಮರುತಮತ ತತ್ವತರಂಗಗಳಿಂದ ಸಂಶೋಭಿಸುತಿಹ ಶ್ರೀ

ಹರಿಕಥಾಮೃತ ಸಾರದ ಸುಧೆಯಿಂದ

ಭೂಸುರರನು ಪಾಲಿಪ

ಹರಿಯಭಕುತಿಸುರಮಣಿ ತರುವನೀವಪಯ

ಶರಧಿಯನಿಪ ಹರಿ 4


ಮರುದಾರಿ ತಿಮಿರಪಹಾರಕ ಸೂರ್ಯ ಸದ್ಭುಕುತರೆನಿಸುವ

ಶರಣಜನ ಹೃತ್ಸಂತಾಪಹಭಾರ್ಯ ಕಾಮಕ್ರೋಧಾದಿ

ಅರಿಷಡ್ವರ್ಗವ ಭರ್ಜಿಪಹರಿ ಶೌರ್ಯ ಸತ್ಕವಿಕುಲವರ್ಯ

ವರದೇಶ ವಿಠಲನ ಚರಣಸೇವಕರ ಸುರತರುವಿನ

ತೆರಪೊರೆಯುಂತ ಮೆರೆಯುವ 5

***