Showing posts with label ಇನ್ನು ನೆಲೆಯ ನೋಡುವರೆ ಮುನ್ನ ಮಾಡಿದ್ದಾಡುವರೇ rukmesha. Show all posts
Showing posts with label ಇನ್ನು ನೆಲೆಯ ನೋಡುವರೆ ಮುನ್ನ ಮಾಡಿದ್ದಾಡುವರೇ rukmesha. Show all posts

Thursday, 5 August 2021

ಇನ್ನು ನೆಲೆಯ ನೋಡುವರೆ ಮುನ್ನ ಮಾಡಿದ್ದಾಡುವರೇ ankita rukmesha

  ..kruti by rukmangadaru

ಇನ್ನೂ ನೆಲೆಯ ನೋಡುವರೆ | ಮುನ್ನ ಮಾಡಿದ್ದಾಡುವರೇ ||ಉನ್ನತ ಮಹಿಮ ನಿನ್ನ ನಂಬಿದವರನು ಕಾಡುವರೇ ಪ


ಎತ್ತ ನೋಡಲು ಕತ್ತಲಿ | ಒತ್ತಿ ಕವಿಯಿತು ಸುತ್ತಲಿ |ಇತ್ತ ಬಾಯೆಂದು ಕರೆದಭಯ ಕರವ ನೀಡುತ ನೋಡುತಲಿ 1

ರಾಸಿ ರೊಕ್ಕದಾಶೆಗಾಗಿ | ಘಾಸಿ ಆದೆ ಕಾಸಿಗಾಗಿ |ದಾಸ ಪಾಲಕ ಲಕ್ಷ್ಮೀಶ ತಪ್ಪದಿರೋ ಭಾಷೆಗಾಗಿ 2

ಮನ್ನಿಸೆನ್ನ ಮಾತು ಹರಿಯೇ | ಇನ್ನು ಮಾತೊಂದು ನಾನರಿಯೆ | ಬೆನ್ನು ಬಿದ್ದವರ ಕಾಯೋ ರುಕ್ಮೇಶ ನಾರಾಯಣ ದೊರೆಯೇ 3

****