Showing posts with label ಶಂಕರ ಶಂಭು ಮಹೇಶ ದಿಗಂಬರ govinda. Show all posts
Showing posts with label ಶಂಕರ ಶಂಭು ಮಹೇಶ ದಿಗಂಬರ govinda. Show all posts

Saturday, 16 November 2019

ಶಂಕರ ಶಂಭು ಮಹೇಶ ದಿಗಂಬರ ankita govinda

by ಗೋವಿಂದದಾಸ
ಶಂಕರ ಶಂಭು ಮಹೇಶ ದಿಗಂಬರ |ಕಿಂಕರನುತಿಪಾತ್ರಾ || ಸತ್ಪಾತ್ರಾ ||ಶಂಕರ ಅಂಬಾ ಮನೋಹರ ಶುಭಕರವೆಂಕಟಪತಿಮಿತ್ರಾ | ವಿಚಿತ್ರಾ 1

ನಿತ್ಯಾನಂದ ನಿರಾಮಯ ನಿರುಪಮ |ಮೃತ್ಯುಂಜಯಮೂರ್ತಿ|| ಸುಮೂರ್ತಿ ||ನಿತ್ಯತೃಪ್ತ ನಿರಾಶ್ರಯ ನಿರ್ಮಲ |ಸತ್ಯಂ ಜಯಕೀರ್ತಿ | ಸುಕೀರ್ತಿ 2

ಹಿಮಕರ ಶೈಲ ನಿವಾಸ ಸುರಾಸುರ |ನಮಿತ ಶೋಕಹಾರೀ ||ಉದಾರಿ||ಪ್ರಮಥಾಧಿಪ ಪರಮೇಶಪರಾತ್ಪರ|ಡಮರು ಬಾಲಧಾರಿ | ಪುರಾರಿ 3

ಚಂದಿರಧರ ಅಘವೃಂದ ವಿನಾಶನ |ವಂದಿಸುವೆನು ದೇವಾ || ಮಹದೇವಾ ||ಮಂದರಧರಗೋವಿಂದನ ದಾಸಗೆ |ಚಂದದಿ ವರವೀವಾ | ಸಂಜೀವಾ 4
*******