Showing posts with label ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ venkatakrishna. Show all posts
Showing posts with label ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ venkatakrishna. Show all posts

Tuesday, 1 June 2021

ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ ankita venkatakrishna

by yadugiriyamma 

 ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ

ನಮೋ ನರಹರಿ ನಾರಾಯಣ ಶ್ರೀಪರಮಪುರುಷಗೆ ಪ


ನಂದನಕಂದ ಮುಕುಂದ ಇಂದಿರೇಶಗೆ

ಮಂದರೋದ್ಧಾರ ಹರಿಸುಂದರಾಂಗಗೆ ಅ.ಪ


ಕಂದನ ನುಡಿಯ ಕೇಳಿ ತಾಯಿ ತಂದೆಗಳು ಆ

ನಂದ ಪಡುವ ತೆರದಿ ಮಂದಮತಿ

ಯಿಂದ ಪೇಳಿದ ಹೊಂದಿಕೆಯಿಲ್ಲದ ನುಡಿಯ

ಕುಂದ ಕ್ಷಮಿಸಿ ನಿಮ್ಮ ಪಾದದ್ವಂದ್ವದಲಿರೆಸೆನ್ನ 2


ವಾಸುದೇವ ನಿಮ್ಮ ಪಾದದಾಶೆಯಿಂದಿದೆ ಆತ್ಮ ಇ

ನ್ನೇಸು ದಿನ ಈ ಹೇಸಿಕೆಭವದಿ

ಘಾಸಿಪಡುವುದೈ ವಾಸುಕಿಶಯನ ಶ್ರೀನಿ

ವಾಸ ರಂಗ ಶೀಘ್ರದಿಂಮುಕ್ತಿಯ ಪಾಲಿಸೋ 3

***