Showing posts with label ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ gopalakrishna vittala. Show all posts
Showing posts with label ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ gopalakrishna vittala. Show all posts

Monday, 2 August 2021

ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ankita gopalakrishna vittala

ಮಂಗಳಂ ಜಯ ಮಂಗಳಂ

ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ಪ.


ಮಂಗಳಂ ಕೊಳಲನೂದುವ ದೊರೆಗೆ

ಮಂಗಳಂ ಶ್ರೀ ಶ್ರೀನಿವಾಸ ವೆಂಕಟನಿಗೆ

ಮಂಗಳಂ ಶೇಷಾಚಲ ಹರಿಗೆ ಅ.ಪ.


ವೈಕುಂಠದಲಿ ಬಂದವಗೆ

ಆ ಕೋಲಗಿರಿಯಲಿ ನಿಂದವಗೆ

ತಾ ಕಾಸುಕಾಸಿಗೆ ಬಡ್ಡಿಯ ಕೊಳುತಲಿ

ಬೇಕಾದ ವರಗಳ ಕೊಡುವನಿಗೆ 1

ಬುತ್ತಿ ಪೊಂಗಲುಗಳ ಮಾರುವಗೆ

ಮತ್ತೆ ದರ್ಶನ ಕೊಡದೆ ಒದೆಸುವಗೆ

ನಿತ್ಯ ಸ್ವಾಮಿಪುಷ್ಕರಣಿ ತೀರದಿ ನಿಂತು

ಭೃತ್ಯವರ್ಗಗಳನು ಪೊರೆವವಗೆ 2

ಶಂಖ ಚಕ್ರ ವರ ಹಸ್ತನಿಗೆ

ಶಂಕೆಯಿಲ್ಲದೆ ಅಭಯ ಕೊಡುವನಿಗೆ

ಶಂಕರಮಿತ್ರಗೆ ಪರಮಪವಿತ್ರಗೆ

ಸಂಕೋಲೆ ಹನುಮಗ್ಹಾಕಿಸಿದವಗೆ 3

ವೃಂದಾವನದಲಿ ಮೆರೆದವಗೆ

ಮಂದಗಮನೆಯರ ಮೋಹಿಪಗೆ

ಚಂದದ ಪೊಂಗೊಳಲೂದಿ ಗೋಪಿಯರ ಕಾಯ್ದ

ಇಂದುವದನ ಗೋಪಿ ಕಂದನಿಗೆ 4

ನಾಗರಾಜನ ಗಿರಿ ನಿಲಯನಿಗೆ

ಯೋಗಿಗಳಿಗೆ ನಿಲುಕದ ಹರಿಗೆ

ಸಾಗರನಿಲಯ ಗೋಪಾಲಕೃಷ್ಣವಿಠ್ಠಲ

ಭೋಗಿಶಯನ ಲಕ್ಷ್ಮೀಪತಿಗೆ 5

****