Showing posts with label ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ vijaya vittala. Show all posts
Showing posts with label ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ vijaya vittala. Show all posts

Thursday 17 October 2019

ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ankita vijaya vittala

ವಿಜಯದಾಸ
ಹೇಳುವೆನು ಕೇಳಿ ಕರ್ಣಾಮೃತವ
ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ

ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ
ಲಕ್ಷಕ್ಕೊಂದಾದರು ಮೊದಲೇ ಇಲ್ಲಾ
ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ
ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1

e್ಞÁನ ಕರ್ಮರ ಲಂಬನ ಮಾಡಿ ತಿಳಿದಂಥ
ಮಾನವನು ನಾನಲ್ಲ ಎಂದೆಂದಿಗೂ
e್ಞÁನಿಗಳ ಮನೆಯ ತೊಂಡರ ಪಾದರಕ್ಷೆಯಾ
ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2

ರಾಗತಾಳ ಭೇದ ಜತೆ ಜಾಣತನದಿಂದ
ವಾಗರ ನಿಮಿತ್ಯ ಪೇಳಲಿಲ್ಲಾ
ಹ್ಯಾಗಾದರೇನು ನಾರಾಯಣಚ್ಯುತನೆಂದು
ಕೂಗಿ ಕಾಲವ ಕಳದೆ ಜನುಮ ಸಾಧನಕೆ 3

ಬೆಲ್ಲ ಕರದಲಿ ಪಿಡಿದು ಆವನಾದರೇನು
ಎಲ್ಲಿ ತಂದರೆ ಅದು ಸೀ ಎಲ್ಲವೇ
ಬಲ್ಲನವ ನರಿಯನಿವನೆಂದು ಆಡದಿರಿ
ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4

ಹರಿದೈವವೆಂದು ತಾ ಉತ್ತರೋತ್ತರ ತಿಳಿದು
ಗುರುಮಧ್ವಮತದಲ್ಲಿ ಲೋಲಾಡಲು
ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು
ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
*********