Showing posts with label ಗೌರೀ ವರಶಿವ ನಮೋ ನಮೋ govinda. Show all posts
Showing posts with label ಗೌರೀ ವರಶಿವ ನಮೋ ನಮೋ govinda. Show all posts

Monday, 11 November 2019

ಗೌರೀ ವರಶಿವ ನಮೋ ನಮೋ ankita govinda

by ಗೋವಿಂದದಾಸ
ಗೌರೀ ವರಶಿವ ನಮೋ ನಮೋ | ಶಿವ |ಗೌರೀವರ ಶಿವ ನಮೋ ನಮೋ |

ಈಶಪರಾತ್ಪರದೋಷನಿವಾರ |ಕಾಶೀಪುರವರವಾಸ ವಿಶ್ವೇಶ್ವರ 1

ಕರಿಚರ್ಮಾಂಬರ ಕರುಣಾಕರ |ಸ್ಮರಿಸಲು ಸರ್ವರದುರಿತನಿವಾರ 2

ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ 3

ಸುರ ಗಂಗಾಧರ | ನರರುಂಡಮಾಲಾ |ಕರದಿ ತ್ರಿಶೂಲವು ಉರಗಕುಂಡಲ 4

ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ಕೈರಾತನಟನ ಶಂಕರ 5

ಷಣ್ಮುಖ ಭೈರವ ಭೃಂಗಿ ಪ್ರಮಥ |ಗಣನಾಥ ವೀರಭದ್ರ | ನಂದಿವಂ ದಿತ 6

ಮಂದರಧರಗೋವಿಂದನ ಸಖನೆ |ವಂದಿಪೆದಾಸನ ಪಾಲಿಸು ಶಿವನೆ 7
*******