Showing posts with label ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆ ನಿನ್ನ ಚಿತ್ತ hayavadana INNARIGUSURUVE INNARA BALALISUVE NINNA CHITTA. Show all posts
Showing posts with label ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆ ನಿನ್ನ ಚಿತ್ತ hayavadana INNARIGUSURUVE INNARA BALALISUVE NINNA CHITTA. Show all posts

Sunday, 7 November 2021

ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆ ನಿನ್ನ ಚಿತ್ತ ankita hayavadana INNARIGUSURUVE INNARA BALALISUVE NINNA CHITTA

 


ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆ

ನಿನ್ನ ಚಿತ್ತ ಬಂದಂತೆ ನೀನೆ ಕಾಯಯ್ಯ ಪ.


ಅನ್ನಾಥರೊಡೆಯ ಎನ್ನ ಮುನ್ನ ಮಾಡಿದ ಪಾಪತÀನ್ನ ಫಲವಾಯಿತೆಂದು ಇನ್ನುಬ್ಬಿ ಕೊಬ್ಬುತಿದೆಎನ್ನುದರದಿ ಅನುದಿನ್ನ ಕೂಡಿಘನ್ನಪಿತ್ತವೆಂಬ ಬಲುಕಿಚ್ಚು ಹೆಚ್ಚುತಿದೆ 1


ದ್ರೌಣ್ಯಸ್ತ್ರದಿಂದ ಬೆಂದ ನಿನ್ನ ತಂಗಿಯ ಮೊಮ್ಮಗಸನಕಾದಿಗಳರ್ಚಿಸುವ ಸೌಮ್ಯಪಾದದಕೊನೆಯನ್ನೆ ಮುಟ್ಟಿಸಿ ಪೆಣನಾಗಿರ್ದ ಹಸುಳೆಯ ಜನರು ಜಯಜಯವೆನೆ ಜೀವಂತನ್ನ ಮಾಡಿದೆ 2


ಹಸ್ತದ ಸುಧೆಯಿಂದ ಭಕ್ತನ ಉದರವನೆ ತುಂಬಿನಿತ್ಯಾಮೃತಕರ ವೈದ್ಯ ಧನ್ವಂತರಿ ಬದುಕಿಸಯ್ಯಸತ್ಯಸಂಧನು ನೀನು ನಿತ್ಯ ಮೃತನು ನಾನುಭೃತ್ಯನು ಪಾಪವ ಕಿತ್ತು ಎತ್ತಿಕೋ ತಂದೆ 3


ಅಂಜಿದ ಕಪಿಕಟಕ ಸಭೆಯ ಪಂಜರ ಬಸಿವುತಿದೆ ನಿನ್ನಕಂಜಾಕ್ಷದಿಂದ ನೋಡಿದರವರಂಜಿಪೋಗದೆಅಂಜನಾದೇವಿಯ ಸುತನಾಳಿದ ರಘುರಾಯಅಂಜಿಸಬೇಡ ತಂದೆ ನಿನ್ನ ಕಂದನ ರಕ್ಷಿಸಿಕೊ 4


ವನ್ನದ ಹರಿಣನಂತೆ ಸುತ್ತ ಮುನ್ನ ಬರಲು ಕೃಷ್ಣಎನ್ನ ತಾಪವು ಅನುದಿನ್ನ ತಟ್ಟದುಇನ್ನೊಬ್ಬ ಮದ್ದನೀಯೆ ಅದು ಉನ್ನತವಾಗುತಿದೆ ತಂದೆಎನ್ನಾಳು ಹಯವದನ ಇನ್ನಾದರೆ ಸಲಹೊ 5

***