ರಾಗ ಸಾರಮತಿ ಏಕತಾಳ
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ।
ವ್ಯಾಸಮುನಿರಾಯರ ಸಂನ್ಯಾಸದಿರವ ॥ ಪ ॥
ಆಸೆಯಿಂದ ತಮ್ಮುದರ ಪೋಷಣಕಾಗಿ ।
ಛಪ್ಪನ್ನ ದೇಶವ ತಿರುಗಿ ಸಂಚಾರ ಮಾಡುತ ॥
ಮೀಸಲ ಮಡಿ ಬಚ್ಚಿಟ್ಟು ಮಿಂಚು ಕೂಳನುಂಡು ದಿನ ।
ಮೋಸ ಮಾಡಿ ಕಳೆವ ಸನ್ಯಾಸಿಗಳು ಸರಿಯೆ ॥ 1 ॥
ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ - ।
ಸುರರೊಂದು ಲಕ್ಷ ಕುಟುಂಬಗಳ ॥
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸ - ।
ರಾಯರ ಗುಣಗಣ ಗಾಂಭೀರ್ಯಾದಿಗಳ ॥ 2 ॥
ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ - ।
ಯುಗಳವನರ್ಚಿಸಿ ಭಕುತಿಯಿಂದ ॥
ರಘುಪತಿ ಭಜಕ ಬ್ರಹ್ಮಣ್ಯತೀರ್ಥರ ಕುವರ ।
ರಂಗವಿಠಲ ನನ್ನು ಬಿಡೆಬಿಡೆನು ಎಂಬ ॥ 3 ॥
**********
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು
ವ್ಯಾಸಮುನಿರಾಯರ ಸಂನ್ಯಾಸದಿರವ ||ಪ||
ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ
ದೇಶವ ತಿರುಗಿ ಸಂಚಾರ ಮಾಡುತ
ಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನ
ಮೋಸಮಾಡಿ ಕಳೆವ ಸಂನ್ಯಾಸಿಗಳ ಸರಿಯೆ ||೧||
ಕೆರೆಬಾವಿ ಪುರ ಅಗ್ರಹಾರಂಗಳ ಮಾಡಿ ಭೂ-
ಸುರರೊಂದು ಲಕ್ಷ ಕುಟುಂಬಗಳ
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ-
ಯರ ಗುಣಗಣ ಗಾಂಭೀರ್ಯಾದಿಗಳ ||೨||
ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ-
ಯುಗಳವನರ್ಚಿಸಿ ಭಕುತಿಯಿಂದ
ರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರ
ರಂಗವಿಠಲನನ್ನು ಬಿಡೆಬಿಡೆನು ಎಂಬ ||೩||
*******