Showing posts with label ಏಕಯ್ಯ ಎನ್ನ ನೀ ಪರಿಪಾಲಿಸೆ others. Show all posts
Showing posts with label ಏಕಯ್ಯ ಎನ್ನ ನೀ ಪರಿಪಾಲಿಸೆ others. Show all posts

Friday, 27 December 2019

ಏಕಯ್ಯ ಎನ್ನ ನೀ ಪರಿಪಾಲಿಸೆ others

ರಾಗ ಕಲ್ಯಾಣಿ ಝಂಪೆ ತಾಳ

ಏಕಯ್ಯ ಎನ್ನ ನೀ ಪರಿಪಾಲಿಸೆ
ಲೋಕೈಕನಾಥ ನಿನಗೇಕೆ ಬೇಸರವಿಷ್ಟು ||ಪ||

ತೇರಿಗೊಂದೇ ಬಂಡಿ ಹೂಡಲೇಳೇ ಕುದುರೆ
ಸೇರಿಸುತ ಕಟ್ಟಲು ಭುಜಂಗ ಹಗ್ಗ
ಸಾರಥಿಯು ಕುಂಟನೈ ಹರಿಸೆ ಧರಣಿಯು ಇಲ್ಲ
ಈ ರೀತಿಯಾದೊಡೆ ತಿರಿವ ದಿನಪನ ನೋಡು ||೧||

ಸಿರಿಯು ಧರಣಿಯು ನಿನಗೆ ಮಡದಿಯರು , ಮಾವನು
ಹಿರಿಯ ರತ್ನಾಕರನು ರಜತಾದ್ರಿವಾಸಿ
ಹಿರಿಯ ಮೊಮ್ಮಗನು ಓಷಧೀಷ ತಾ ಮೈದುನನು
ದಾರಿದ್ರ್ಯವೇನಯ್ಯ ಎನ್ನ ಪೊರೆಯುದಕೆ ||೨||

ಅಂದು ಧ್ರುವನು ಕಾಯ್ದೆ ಅಂಬರೀಷನು ಧರ್ಮ -
ನಂದನನ ಪೊರೆಯೆ ಸಾಲವನೆಲ್ಲಿ ತಂದೆ
ಇಂದೆನ್ನ ಪೊರೆಯಲು ಅಂದಿತ್ತವರು ನೂಕುವರೆ
ತಂದೆ ವೈಕುಂಠಪುರದೆರೆಯ ನರಹರಿಯೆ ||೩||
*******