ರಾಮದಾಸರು ankita ramadasa
ಗುಮಾನ ಆರದು ಇನ್ನ್ಯಾಕೆಹರಿನಾಮದ ಬಲವೊಂದಿರಲಿಕ್ಕೆ ಪ
ಸ್ವಾಮಿಮಾಧವನ ಪ್ರೇಮಪಡೆದು ಮಹನಾಮಮೃತದ ಸವಿಯುತಲಿರುವರ್ಗೆ ಅ.ಪ
ರೊಚ್ಚಿಗೆದ್ದು ಮಾಡುವುದೇನೋ ಜನಸ್ವಚ್ಛದಿ ಒಡಗೂಡಿದರೇನೋಮೆಚ್ಚಿ ಕೊಡುವಫಲ ಇವರೇನೋ ಅತಿಹುಚ್ಚ ನೆಂದರಾಗುವುದೇನೋನಿಶ್ಚಲಚಿತ್ತದಿ ಅಚ್ಯುತಾನಂತನಬಚ್ಚಿಟ್ಟು ಮನದೊಳು ಉಚ್ಚರಿಸುವರಿಗೆ 1
ಸತಿಸುತರಿವರಿಂದ್ಹಿತವೇನೊ ತನ್ನಪಿತಮಾತೆ ಮುನಿದರೆ ಕೊರತೇನೋಅತಿಸಂಪತ್ತಿನಿಂದ ಗತಿಯೇನೋ ಈಕ್ಷಿತಿಜನ ಮೆಚ್ಚಲು ಬಂತೇನೋರತಿಪತಿಪಿತನಂ ಅತಿ ಗೂಢತ್ವದಿಸತತದಿ ನುತಿಸುವ ಕೃತಕೃತ್ಯರಿಗೆ 2
ಭೂಮಿಪ ಕೋಪಿಸಲಂಜುವರೆ ಈತಾಮಸರಿಗೆ ತಲೆ ಬಾಗುವರೇಭೂಮಿ ದೈವಗಳ ಬೇಡಿದರೆ ಮನಕಾಮಿತವನ್ನು ಪೂರೈಸುವರೇಕಾಮಿತಾರ್ಥನೀಗಿ ಮಹಾಮಹಿಮನನೇಮದಿ ಪಠಿಪ ಶ್ರೀರಾಮದಾಸರಿಗೆ 3
***