Showing posts with label ಘನ ಶ್ರೀ ಗುರು ಅವಧೂತನೇ gurumahipati. Show all posts
Showing posts with label ಘನ ಶ್ರೀ ಗುರು ಅವಧೂತನೇ gurumahipati. Show all posts

Wednesday, 1 September 2021

ಘನ ಶ್ರೀ ಗುರು ಅವಧೂತನೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಘನ ಶ್ರೀ ಗುರು ಅವಧೂತನೇ ಪ 


ಅನಂತ ರೂಪವ ದೋರುವೆ ದತ್ತಾತ್ರೇಯ ಸುರ ಮುನಿ ಸುತನೇಅ.ಪ ನೀನೇ ಸ್ವಾಮಿ ಕೂರ್ಮನು ನೀನೇ ವರಹನು ನೀನೇ ನರಸಿಂಹನು ನೀನೇ 1 

ಬಲಿಚಕ್ರನ ಮನಿ ಮುಂದಲಿ ಸುಳಿದು ನಿಂದ ವಾಮನ ನೀನೇ ಕಲಿತನದಲಿ ಕ್ಷತ್ರೇರ ಸಂಹರಿಸಿದ ಪರಶುಧರನು ನೀನೇ ಇಳೆಯ ಭಾರಕರಾದ ರಾವಣಾದಿಕರಾ ತರಿದ ರಾಮನು ನೀನೇ ಫಲಗುಣನಾ ರಥ ಸಾರಥಿಯಾದಾ ಶ್ರೀ ಕೃಷ್ಣನು ನೀನೇ 2 

ರೂಪನು ನೀನೇ ಚಪಲತರದ ಹಯವೇರಿ ಮೆರೆದನು ಕಲ್ಕ್ಯಾವತಾರ ನೀನೇ ತಪನ ಶತಕೋಟಿ ಪ್ರಕಾಶವೆನಿಸುತಿಹ ಪರಬೊಮ್ಮನು ನೀನೇ ಕೃಪೆಯಿಂದಲಿ ಸಲಹುವ ಮಹಿಪತಿ ನಂದನ ಪ್ರಭು ನೀನೇ 3

****