Showing posts with label ಗೋಪಾಲ ವಿಠ್ಠಲ ನಿನ್ನ ಪೂಜೆ ಮಾಡುವೆನು vijaya vittala. Show all posts
Showing posts with label ಗೋಪಾಲ ವಿಠ್ಠಲ ನಿನ್ನ ಪೂಜೆ ಮಾಡುವೆನು vijaya vittala. Show all posts

Wednesday, 16 October 2019

ಗೋಪಾಲ ವಿಠ್ಠಲ ನಿನ್ನ ಪೂಜೆ ಮಾಡುವೆನು ankita vijaya vittala

ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು
ಕಾಪಾಡೊ ಈ ಮಾತನು ಪ

ಅಪರಾ ಜನುಮದಲಿಡುವನೆ ಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಅ.ಪ

ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ
ದಾನ ವ್ರತಗಳನೆ ಬಿಡದೆ ಮಾಡಿ
ತೋಪಾಸನಗಳನು ಮಾಡಿ
ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ 1

ಕ್ಷೋಣಿಯೊಳಗೆ ನಡಿಸುತ
ಮೇಣು ಧನ್ಯನ್ನ ಮಾಡು
ಪರಿ ಕೀರ್ತಿ ತುಂಬಿರಲಾಗಿ
ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ2

ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮ ಜನುಮದಲ್ಲಿದ್ದ ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ನೀನೆ ವಿಜಯವಿಠ್ಠಲಯೆಂದು
ಅಂಕುರವ ಪಲೈಸಿ ಫಲಪಾಪ್ತಿಯಾಗದೊ3
*********