..
kruti by ವರದೇಶ ವಿಠಲರು varadesha vittala dasaru
ಸ್ಮರಿಸಿ ಬದುಕಿರೋ ಗುರುರಾಯರ ಪದವ
ಕೊಡುವನು ಸಂಪದವ
ತ್ವರಿತದಿ ಭಜಿಸಲು ಹರುಷದಿ ಕರಪಿಡಿವ
ಸುಜ್ಞಾನವ ಕೊಡುವ ಪ
ಪ್ರಥಮದಿ ದ್ವಿಜಕುಲ ತತಿಯಲ್ಲಿ ಅವತರಿಸಿ
ಬಹುಜರನು ವಲಿಸಿ
ಪಿತೃಭ್ರಾತಾಚಾರ್ಯನು ತಾನೆಂದೆನಿಸಿ ಕವಿವರ ನೆಂದೆನಿಸಿ
ಯತಿವರ ರಘುಕುಲವರ್ಯನ ಸೇವೆಯನು
ಬಹುವಿಧದಲಿ ತಾನು
ಅತಿಹಿತದಲಿ ಗೈಯಲು ಸುಸ್ತವವನು
ವರ್ಣಿಸೆ ಮಹಿಮೆಯನು1
ಸ್ಮರಿಸುವ ಭಕ್ತರ ಪೊರೆವಕರಣಿತಾನು ಸ್ವೀಕರಿಸಿದನದನು
ಹರಿಸಾಕ್ಷಾನನವೆನಿಪಸುವಾಕ್ಯವನು ಸಂಪಾದಿತ ತಾನು
ಹರಿವಿಶ್ವಸುನಾಮದಿ ಭೂತಳದಲ್ಲಿ ಉದಿಸಿದ ಮುದದಲ್ಲಿ
ಪರಿಚಾರ ಕಾಮದಿ ಕರಸ್ನೇಹದಲಿ ಜನಿಸಿದ ಪೂರ್ವದಲಿ 2
ಸಿರಿಗೋಪಾಲಾಖ್ಯರು ಸುಜ್ಞಾನವನು ಕರುಣಿಸೆ ಮರ್ಮವನು
ಸರಸದಿ ಗ್ರಂಥದವರ ಸುಹಸ್ಯವನು ಸಂಗ್ರಹಿಸಿದ ತಾನು
ಸಿರಿರಘುವರ ಕರುಣದಿ ಧರೆಯೊಳು ಮೆರೆವುಲ್ಲರುವಿಗಿಲ್ಲರುವ
ವರದೇಶ ವಿಠಲನ ಭೃತ್ಯನೆ ತಿಳಿಯುವನು
ಗುರುವಿನ ಮಹಿಮೆಯನು3
****