Showing posts with label ಯೋಚನೆಗಳು ನೀನೇ ನನ್ನ ಯಾಚನೆಯೂ ನೀನೇ others YOCHANEGALU NEENE NANNA YAACHANEYOO NEENE. Show all posts
Showing posts with label ಯೋಚನೆಗಳು ನೀನೇ ನನ್ನ ಯಾಚನೆಯೂ ನೀನೇ others YOCHANEGALU NEENE NANNA YAACHANEYOO NEENE. Show all posts

Friday, 25 June 2021

ಯೋಚನೆಗಳು ನೀನೇ ನನ್ನ ಯಾಚನೆಯೂ ನೀನೇ ankita others YOCHANEGALU NEENE NANNA YAACHANEYOO NEENE


Audio by Rashmi Ramesh


ರಚನೆ - ಭ ರಾ ವಿಜಯಕುಮಾರ್ 

ರಾಗ ಶುದ್ಧ ಸಾರಂಗ 


ಮತಿಗೆ ನಿಲುಕುವ ವಿಜ್ಞಾನ ಪರಿಧಿಯ ಅರಿವಿನಲೀ....

ಸ್ತುತಿಗೆ ದೊರಕುವ ಭಾವದಾನಂದ ಮೈತ್ರಿಯಲೀ...

ಹಿತದ ಜೀವನ ಕಾರಣದ ಸುಖ ದುಃಖ ಸ್ವಾದದೊಳೆನ್ನ ತೇಲಿಸುತ ಮುಳುಗಿಸುತ....

ನಡೆಸುವಂಬಿಗನಾರೊ ನಂಬಿಗನೆಂದೆಣಿಸುವೆನೂ......|

(ಉಗಾಭೋಗದ ಶೈಲಿ)

***

Time 2.01

ಯೋಚನೆಗಳು ನೀನೇ ನನ್ನ ಯಾಚನೆಯೂ ನೀನೇ

ಸೂಚನೆಯೂ ನೀನೇ ಮಾಯಾ ವಂಚನೆಯೂ ನೀನೇ.. ನೀನೇ...ನೀನೇ.......ತಾನೆ?!


ಸಂಚಿತವೆನುವಾ ಪದ ನೀನೇˌ 

ಮುಂಚಿತ ತಿಳಿಯದ ಹದ ನೀನೇ

ಕಿಂಚಿತ್ತಾದರು ಸುಳಿಸದೆ ಮನಕೆ

ಮಿಂಚಿನ ಸುಖ ತರುವವ ನೀನೇ...|


ಹಂಚುವ ಮತಿ ಕೊಡುವವ ನೀನೇ

ಕೊಂಚವು ಉಳಿಸದ ಗತಿ ನೀನೇ

ಪಂಚಭೂತಗಳ ಸ್ಥಿತಿ ನೀನೇ

ಪ್ರಪಂಚಕೆನ್ನ ತಂದವ ನೀನೇ..ನೀನೇ..ತಾನೇ....?

(ಭ ರಾ ವಿಜಯಕುಮಾರ) (ವೈಕುಂಠ ಏಕಾದಶಿ 2020)

****


by B R Vijayakumar, ಕವಿ, ಸಾಹಿತಿ, Vidyaranyapura, Bengaluru +91 94487 42877

"Dasa sahitya" in Kannada literature is  world class one. 15th century was the peak of this type. Purandara dasa, Kanaka dasa, vyasa raja and many others in that period has written in many types like keertana's, kavya's, mundige, ugabhoga, suladi  etc.., Even now there are poets who can write such literature. One such Keertane with Ugabhoga written by a poet of today is sung well here in shuddasaranga raga. It prides and bows to the eternal spirt for what all we have today.

***