ಹರಿ ಹರಿ ಹರಿಯೆನ್ನಿ ಹರಿಯ ನೆನವಿಗೊಮ್ಮೆ ತನ್ನಿ pa
ಹಿಡಿದು ನಿಜ ಒಂದು ¥ಥ ಪಡೆಯಬೇಕು ಸ್ವಹಿತ ನೋಡಿ ಗೂಢಿನೂಳು ಗುರುತ ಕೊಡುವ ನೋಡಿ ಗುರುನಾಥ ಒಡಯನಹುದಯ್ಯನೀತ ಪೊಡವಿಯೊಳು ಶ್ರೀನಾಥ ಮಾಡಿ ಭಕ್ತಿ ಏಕಚಿತ್ತ ಕೂಡಿ ಜ್ಞಾನಸನ್ಮತ 1
ಹಿಡಿದು ನೀವು ಗುರುಪಾದ ಮಾಡಬ್ಯಾಡಿ ಭೇದ ಕಡಿಯಬೇಕು ಕಾಮಕ್ರೋಧ ಕೂಡಿ ನಿಜಸುಭೋದ ಬೋಧ ಗೂಢಗುಪ್ತವಾಗಿಹ್ಯದ ಕೊಂಡಾಡುತಿಹ್ಯ ವೇದ ಬಿಡದೆ ಮಹಿಮೆ ನಿರ್ಗುಣದ 2
ನಾವು ನೀವುವೆಂಬ ನುಡಿ ಗೋವಿಸುವದೀಡ್ಯಾಡಿ ಹ್ಯಾವ ಹೆಮ್ಮೆಹಿಡಿಯಬ್ಯಾಡಿ ಭಾವ ಬಲಿದು ಪೂರ್ಣ ನೋಡಿ ಕಾವ ಕರುಣನ ಕೂಡಿ ಭವಬಂಧನ ನೀಗಿ ಬಿಡಿ ಪಾವನ್ನವಾದ ನೋಡಿ ಮಹಿಪತಿ ನಿಜಗೂಡಿ 3
***