Showing posts with label ಕಡೆಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ neleyadikeshava. Show all posts
Showing posts with label ಕಡೆಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ neleyadikeshava. Show all posts

Wednesday, 1 September 2021

ಕಡೆಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ankita neleyadikeshava

 ..

ಕಡೆ ಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ


ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ 1


ಹಲವು ಜನ್ಮದ ಪಾಪವೆನಿಪ ಸೊಕ್ಕಾನೆ ಸೊಂಡಿಲು ಸುತ್ತಿ ಬಂದು ಸೀವರಿಸುತಿದೆಕೊಮಲೆವ ದುಷ್ಕøತವೆಂಬ ಗಜಕೆ ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ 2


ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು 3

***