..
ಕಡೆ ಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ
ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ 1
ಹಲವು ಜನ್ಮದ ಪಾಪವೆನಿಪ ಸೊಕ್ಕಾನೆ ಸೊಂಡಿಲು ಸುತ್ತಿ ಬಂದು ಸೀವರಿಸುತಿದೆಕೊಮಲೆವ ದುಷ್ಕøತವೆಂಬ ಗಜಕೆ ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ 2
ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು 3
***
No comments:
Post a Comment