Showing posts with label ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು prasannavenkata VAARIJANAABHANE KARUNAVE STIRA SAMSAARYERAVU. Show all posts
Showing posts with label ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು prasannavenkata VAARIJANAABHANE KARUNAVE STIRA SAMSAARYERAVU. Show all posts

Saturday 4 December 2021

ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು ankita prasannavenkata VAARIJANAABHANE KARUNAVE STIRA SAMSAARYERAVU



by ಪ್ರಸನ್ನವೆಂಕಟದಾಸರು


ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು ಕೇಳಾತ್ಮ |ಪ|
ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸರಿಯು ಕೇಳಾತ್ಮ |ಅಪ|

ಕೆರೆಯ ಕಟ್ಟಿಸು ಹೂದೋಟವನ್ಹಾಕಿಸು ಸೆರೆಯ ಬಿಡಿಸು ಪುಣ್ಯಾತ್ಮ |
ಅರಿಯದೆ ಮನೆಗೆ ಬಂದವರಿಗಶನವಿತ್ತು ಪರಮ ಪದವಿ ಪಡೆಯಾತ್ಮ |೧|

ಆನೆ ಕುದುರೆ ಒಂಟೆ ಸೈನ್ಯ ಭಂಡಾರವ ಏನು ಪಡೆದರೇನು ಆತ್ಮ|
ನಾನಾ ವಿಧದಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು ಕೇಳಾತ್ಮ |೨|

ಲೆತ್ತ ಪಗಡೆ ಚದುರಂಗ ಜೂಜಾಟವ ಮತ್ತಾಡಿ ಕೆಡಬೇಡ ಆತ್ಮ |
ಭಕ್ತಿಯಲಿ ಪುರಂದರ ವಿಠಲನ ನೆನೆ ಮುಕ್ತಿಯ ಪಡೆವೆ ಕೇಳಾತ್ಮ |೩|
***
ರಾಗ ಬಿಲಹರಿ ಛಾಪುತಾಳ (raga tala may differ in audio)

vArijanABana karuNave sthira saMsAra eravu kELAtma |pa|
jArutadAyuShya dUrada mukutige dAri sariyu kELAtma |apa|
 
kereya kaTTisu hUdOTavanhAkisu sereya biDisu puNyAtma |
ariyade manege baMdavarigaSanavittu parama padavi paDeyAtma |1|
 
Ane kudure oMTe sainya BaMDArava Enu paDedarEnu Atma|
nAnA vidhadiMda aLiduLidare muMde hAni tappadu kELAtma |2|
 
letta pagaDe caduraMga jUjATava mattADi keDabEDa Atma |
Baktiyali puraMdara viThalana nene muktiya paDeve kELAtma |3|
***

pallavi

vArijanAbhana karuNave sthira samsAra eravu kELAtma

anupallavi

jArutadAyuSya dUrada mukutige dAri sathiyu kELAtma

caraNam 1

kereya kaTTisu pUdODva hAkisu sereya biDisu punyAtma
ariyade manege bandavaringashanavittu parama padavi paDeyAtma

caraNam 2

sati sutaremba Aseya biDu avarinda hitavAgadu kaNDya Atma
matikeTTu keDabEDa maraNa tappadu munde gati yAvudu kaNDya Atma

caraNam 3

Ane kudure oNTe sainya bhANDArava Enu paDedarEnu Atma
nAnA bageyinda aLiduLidare munde hAni tappadu kaNDya Atma

caraNam 4

eravina sirigubbi mai marevare nIra karedaruNTe beNNe Atma
uragana heDeya neraLa sErida karpe sthiravendu bagevare Atma

caraNam 5

letta pagaDe caturanga jUjADava mattADi keDa bEDa Atma
bhaktiyali purandara viTTalana neneyalu mukti paDEve kaNDya Atma
***

ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ||
ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ||

ಕೆರೆಯ ಕಟ್ಟಿಸು ಪೂದೋಟವ ಹಾಕಿಸು, ಸೆರೆಯ ಬಿಡಿಸು ಪುಣ್ಯಾತ್ಮ
ಅರಿಯದೆ ಮನೆಗೆ ಬಂದವರಿಂಗಶನವಿತ್ತು, ಪರಮ ಪದವಿ ಪಡೆಯಾತ್ಮ ||

ಸತಿ ಸುತರೆಂಬ ಆಸೆಯ ಬಿಡು, ಅವರಿಂದ ಹಿತವಾಗದು, ಕಂಡ್ಯ ಆತ್ಮ
ಮತಿಕೆಟ್ಟು ಕೆಡಬೇಡ ಮರಣ ತಪ್ಪದು, ಮುಂದೆ ಗತಿ ಯಾವುದು, ಕಂಡ್ಯ ಆತ್ಮ ||

ಆನೆ ಕುದುರೆ ಒಂಟೆ ಸೈನ್ಯ ಭಾಂಡಾರವ ಏನು ಪಡೆದರೇನು, ಆತ್ಮ
ನಾನಾ ಬಗೆಯಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು, ಕಂಡ್ಯ ಆತ್ಮ ||

ಎರವಿನ ಸಿರಿಗುಬ್ಬಿ ಮೈಮರೆವರೆ, ನೀರ ಕಡೆದರುಂಟೆ ಬೆಣ್ಣೆ, ಆತ್ಮ
ಉರಗನ ಹೆಡೆಯ ನೆರಳ ಸೇರಿದ ಕಪ್ಪೆ ಸ್ಥಿರವೆಂದು ಬಗೆವರೆ, ಆತ್ಮ ||

ಲೆತ್ತ ಪಗಡೆ ಚತುರಂಗ ಜೂಜಾಡವ ಮತ್ತಾಡಿ ಕೆಡಬೇಡ, ಆತ್ಮ
ಭಕ್ತಿಯಲಿ ಪುರಂದರವಿಠಲನ ನೆನೆಯಲು ಮುಕ್ತಿ ಪಡೆವೆ, ಕಂಡ್ಯ ಆತ್ಮ || 
*********

ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.

ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1

ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2

ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3

ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4

ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5

ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6

ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7

ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8

ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
***