Showing posts with label ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆ kamalanabha vittala. Show all posts
Showing posts with label ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆ kamalanabha vittala. Show all posts

Thursday, 5 August 2021

ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆ ankita kamalanabha vittala

 ..

kruti by Nidaguruki Jeevubai


ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು

ಮಂಗಳಾರತಿ ಎತ್ತಿರೆ ಪ


ರಂಗಯದುಕುಲೋತ್ತುಂಗ ಭವ ಭಯ

ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ

ಮೀನ ಕೂರ್ಮ ಕ್ರೋಡ ನೃಹರಿಗೆ

ದಾನವ ಬೇಡಿದಗೆ

ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ

ಸಾನುರಾಗದಿ ಬುದ್ಧ ಕಲ್ಕ್ಯನಿಗೆ ಜಯ 1


ಅಕ್ಷರೇಢ್ಯ ಅನಿರುದ್ಧ ಮೂರುತಿಗೆ

ಪಕ್ಷಿವಾಹನ ಹರಿಗೆ

ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ

ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2

ಗೋಕುಲದೊಳು ಗೋಪಾಲಕರೊಡಗೂಡಿ

ಗೋವ್ಗಳ ಕಾಯ್ದವಗೆ

ಗೋವರ್ಧನಗಿರಿ ಎತ್ತಿದ ಧೀರಗೆ

ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3

ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು

ವೃಂದಾರಕರು ನುಡಿಯೆ

ನಂದ ಯಶೋದೆಯರು ಬಂದು ತೋರೆನಲು

ಛಂದದಿಂದ ವಿಶ್ವರೂಪವ ತೋರ್ದಗೆ 4

ಕಾಳಾಹಿವೇಣಿಯರೊಡಗೂಡಿ ನಲಿವಗೆ

ಕಾಳಿಂದಿ ರಮಣನಿಗೆ

ಕಾಲಕರ್ಮಕೆ ಈಶನಾದ ಸ್ವಾಮಿಗೆ

ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5

***