ರಾಗ ಶ್ರೀರಾಗ ಆದಿತಾಳ
ಪಾಲಿಸೋ ಜಗದೀಶ ಅನುದಿನಂ
ಪಾಲಿಸೋ ಜಗದೀಶ ||ಪ||
ಮಂದಬುದ್ಧಿಯಲಿ ಸುದತೀಜನರ ಸೇರಿ
ಕಂದಿದೆನೋ ದೇವಾ ಕಾಯೊ ಮುರಾರಿ
ಇಂದು ಕೈಯ ಬಿಡುವುದು ಉಚಿತವೆ ಶೌರಿ , ನೀ
ತಂದೆ ಗತಿಯು ಎನಗಾರು ವಿಹಾರಿ ||೧||
ಭಕ್ತರ ಪೊರೆಯುವಂಥ ಬಿರುದೆಲೋ ನಿನಗೆ
ಭಕ್ತನೆಲೋ ನಾನು ನಿನ್ನ ಪದಗಳಿಗೆ
ಯುಕ್ತರ ಸಂಗಗಳಿಗೆ ಸೇರಿಸೋ ಎನಗೆ
ತಿಕ್ತವೇನೋ ನಾನು ನಿನ್ನ ನಾಲಿಗೆಗೆ ||೨||
ವೈಕುಂಠಪುರದೊಡೆಯ ಎನ್ನ ಕಾಯುವುದು
ಲೋಕಪಾಲಕನಿಗೆ ಕಷ್ಟವೇನಿಹುದು
ನೂಕಿಬಿಟ್ಟರೆ ಎನ್ನ ನೀತಿಯಾಗುವುದೇ
ಸಾಕಬೇಕು ನೀ ಸುಮನೆ ಇರದೆ ||೩||
*****
ಪಾಲಿಸೋ ಜಗದೀಶ ಅನುದಿನಂ
ಪಾಲಿಸೋ ಜಗದೀಶ ||ಪ||
ಮಂದಬುದ್ಧಿಯಲಿ ಸುದತೀಜನರ ಸೇರಿ
ಕಂದಿದೆನೋ ದೇವಾ ಕಾಯೊ ಮುರಾರಿ
ಇಂದು ಕೈಯ ಬಿಡುವುದು ಉಚಿತವೆ ಶೌರಿ , ನೀ
ತಂದೆ ಗತಿಯು ಎನಗಾರು ವಿಹಾರಿ ||೧||
ಭಕ್ತರ ಪೊರೆಯುವಂಥ ಬಿರುದೆಲೋ ನಿನಗೆ
ಭಕ್ತನೆಲೋ ನಾನು ನಿನ್ನ ಪದಗಳಿಗೆ
ಯುಕ್ತರ ಸಂಗಗಳಿಗೆ ಸೇರಿಸೋ ಎನಗೆ
ತಿಕ್ತವೇನೋ ನಾನು ನಿನ್ನ ನಾಲಿಗೆಗೆ ||೨||
ವೈಕುಂಠಪುರದೊಡೆಯ ಎನ್ನ ಕಾಯುವುದು
ಲೋಕಪಾಲಕನಿಗೆ ಕಷ್ಟವೇನಿಹುದು
ನೂಕಿಬಿಟ್ಟರೆ ಎನ್ನ ನೀತಿಯಾಗುವುದೇ
ಸಾಕಬೇಕು ನೀ ಸುಮನೆ ಇರದೆ ||೩||
*****