Showing posts with label ಸಿಕ್ಕಲು ನೋಡೇ ಸತ್ಸಂಗ ಯನ ಗಕ್ಕಿತು ಸ್ವಾನುಭವದಂಗ gurumahipati. Show all posts
Showing posts with label ಸಿಕ್ಕಲು ನೋಡೇ ಸತ್ಸಂಗ ಯನ ಗಕ್ಕಿತು ಸ್ವಾನುಭವದಂಗ gurumahipati. Show all posts

Wednesday, 1 September 2021

ಸಿಕ್ಕಲು ನೋಡೇ ಸತ್ಸಂಗ ಯನ ಗಕ್ಕಿತು ಸ್ವಾನುಭವದಂಗ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಿಕ್ಕಲು ನೋಡೇ ಸತ್ಸಂಗ | ಯನ | ಗಕ್ಕಿತು ಸ್ವಾನುಭವದಂಗ | ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ | ವಕ್ಕಲವಾದನು ಶ್ರೀನಲ್ಲಾ ಪ 


ಜ್ಞಾನಾಂಜನವನು ತಂದಿಡಲಿ | ಅ | ಪರಿ ಬಿಡಲಿ | ಪರಿ ಭಾಸುವ ಕೋಶದಲೀ | ತಾನೇ ದೋರುವ ಜಗದೀಶಾ 1 

ಭವ ಬಂಧವ ತಿಳಿಯಲು ನೆಲೆಯಾ | ತಾ | ಅವನಿಲಿ ಶುಕನಳಿ ಕನ್ಯಾಯಾ | ವಿವರಿಸಿಯನ್ನೊಳಗೆಚ್ಚರಿಸಿತೆ | ನಾ | ತವಕದಿ ಚಿದ್ಘನದೊಳು ಬೆರೆತೇ 2 

ಏನೆಂದ್ಹೇಳಲಿ ಅಮ್ಮಮ್ಮಾ | ಯನ್ನಾನಂದದ ಸುಖ | ಸಂಭ್ರಮಾ | ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ | ತಾ ನಳಿಯಿತು ಕಲ್ಪನೆ ಬಾಧಾ 3

***