..
kruti: tandevaradagopala vittala (ಪ್ರಹ್ಲಾದಗೌಡರು)
ಶತ್ರುಭಯ ಪರಿಹರಿಸೊ ಭೂತರಾಜ ಪ
ಭವಕೆ ಭೀಕರ ಭಾವಿ ಭೀಮನ ಭಜಿಪ ಭೋಜಾ ಸುತೇಜಾ ಅ.ಪ.
ಒಂದು ಅರಿಯದೆ ಇಂದು ನೀನೆ ನಾನೆಂದು ಕಮರಿ ಕೂಪದಿ ನೊಂದೆನೊ ಭಾವಿ ನಂದಿವಾಹನ ಮಂಗಳ ಪ್ರದ ನೀಲಕಂಠಾ 1
ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ ನಿನ್ನ ಲೋಲ ಮೂರುತಿಯ ನೆನೆವೆ ಫಾಲನಯನಾ ಪಾಲಿಗೇ ಪಾಲನೆಂತೆಂದು ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ 2
ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆಪಾಲಾ ದಿಟ್ಟ ಗುರು ಕೃಷ್ಣವಂದಿತ ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು 3
***