Showing posts with label ಇವುಗಳ ಹಾವಳಿಗಂಜುವಳಲ್ಲ ಅಲ್ಲವುಗಳ ಸ್ಮøತಿಗೆ ನಾನಂಜುವೆನೆ vasudeva vittala. Show all posts
Showing posts with label ಇವುಗಳ ಹಾವಳಿಗಂಜುವಳಲ್ಲ ಅಲ್ಲವುಗಳ ಸ್ಮøತಿಗೆ ನಾನಂಜುವೆನೆ vasudeva vittala. Show all posts

Wednesday, 1 September 2021

ಇವುಗಳ ಹಾವಳಿಗಂಜುವಳಲ್ಲ ಅಲ್ಲವುಗಳ ಸ್ಮøತಿಗೆ ನಾನಂಜುವೆನೆ ankita vasudeva vittala

 ..


kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಇವುಗಳ ಹಾವಳಿಗಂಜುವಳಲ್ಲ ಅ-

ಲ್ಲವುಗಳ ಸ್ಮøತಿಗೆ ನಾನಂಜುವೆನೆ ಪ

ಚಂದ್ರ ಚಂದ್ರಿಕೆಯು ಉದಯಿಸಲ್ಯಾತಕೆ

ನಿಂದ್ರಿಸುವೆನೆ ನಾನದರನ್ನು

ಇಂದ್ರನನುಜನಾ ಶ್ರುತಿಗೆ ಸ್ಮøತಿಗೆ ಬರಲು

ನಿಂದ್ರಿಸಲಾರೆನೆ ನಿಮಿಷ ಮನ 1


ಪಲ್ಲವಿಸವ್ಯಾತಕೆ ಚೂತ ತರುಗಳಿಗಿನ್ನು

ನಿಲ್ಲಿಸುವೆನೆ ಅದರುಲ್ಬಣವ

ಪಲ್ಲವ ಪಾದವ ಮನಸಿಗೆ ಬಂದರೆ

ತಲ್ಲಣಿಸುವೆನೆ ತಾವರೆ ನಯನೆ 2

ಅಂಬುದಗಳೆಲ್ಲ ಅಂಬರವೇರಲಾ

ಡಂಬರಕ್ಕೆ ನಾನು ಇಂಬು ಕೊಡೆ

ಅಂಬುದ ಶ್ಯಾಮನು ಮನದಲಿ ನಿಲಲು

ಥಂಬಿಸಲಾರೆನೆ ಕಂಬು ಕಂಠಿ 3

ಕುಂದ ಕುಸುಮಗಳು ವಿಕಸಿತವಾದರು

ಅಂದಗೆಡುವುದಿಲ್ಲ ಮನಸಿನಲಿ

ಕುಂದರದನ ಎನ್ನ ಮನಸಿಗೆ ತೋರಲು

ಕಂದಿ ಕುಂದುವೆ ಮನ ಮಂದಿರದಿ 4

ಏವಮಾದಿಗಳೆಲ್ಲ ಏನು ಮಾಡವೋ ವಾಸು-

ದೇವವಿಟ್ಠಲ ಸ್ಮøತಿ ಬಾರದಿರೆ

ಶ್ರೀವರ ಚಿತ್ತಕ್ಕೆ ಬಂದರೆ ನಿಂದರೆ

ತಾವರೆನಯನೆ ನೀ ತಂದು ತೋರೆ 5

***