..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ
ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆ
ಈ ಜಗದಿ ಎಣೆಯುಂಟೆ ಅರಸಿನೋಡೆ ||
ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |
ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪ
ಏನು ಯತ್ನಿಸಿದರೂ ತೆರೆಯಲಿಕ್ಕಾಗದ |
ಸ್ವರ್ಣಮಂಜೂಷದೊಳು ಮೂರ್ತಿಗಳ್ ||
ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |
ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1
ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |
ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||
ಭಕ್ತಾಗ್ರೇಸರು ತರಳ ಪ್ರಹ್ಲಾದನಿಗೆ |
ಎದುರಾರು ಉಳ್ಳರೈಧರೆಯ ಮ್ಯಾಲೆ 2
ಬಾಲಕಸ್ತುತಿಸಿದ್ದು ನರಹರಿ ಹರುಷದಿ |
ಕೇಳಿದನು ಆನಂದದಿ ತಾನರ್ತಿಸಲು |
ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |
ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3
ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |
ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||
ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡು
ಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4
ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |
ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||
ತೀರ್ಥರ ಕರ ಅರವಿಂದೋತ್ಪನ್ನ ಈ |
ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5
ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |
ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||
ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |
ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6
ಸಾರಾತ್ಮ ಸುಖಮಯ ಶ್ರುತಿ ವೇದ್ಯ ಮಹದಾದಿ |
ಚರಾಚರ ಜಗತ್ ಕರ್ತ ಪರಮ ಪೂರುಷನು ||
ಮೂರಡಿ ಬೇಡಿದ ಮುರಳೀಧರ ಶ್ರೀಮನ್
ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7
ಈ ರೀತಿ ಹೊಗಳುವ ಸರಿಗಮ ಪದನಿ |
ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||
ಪರಮ ಭಾಗವತ ಮಹಾತ್ಮರು ಕೀರ್ತಿಸೆ |
ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8
ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |
ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |
ಶುಭತಮ ಗುಣ ಕಥನ ಶ್ರವಣದಿಂ ಲಭ್ಯವು |
ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9
ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |
ರುಕ್ಮಿಣಿ ಸತ್ಯಾಯುಕ್ ಅಭಯ ವರದ ||
ಶಂಖಾರಿ ಹಸ್ತ ಹಿರಣ್ಮಣಿ ನಿಭ ಕೃಷ್ಣ |
ಜಗದೇಕ ವಂದ್ಯನು ಮುದದಿ ತಾಕುಣಿದ 10
ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |
ನರಸಿಂಹ ಪರಂಬ್ರಹ್ಮ ನಮೋ ವರಾಹ ||
ನಾರಾಯಣ ವಾಸುದೇವ ಸಂಕರುಷಣ |
ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧ ಪಾಹಿ 11
***