ನಾರಾಯಣ ಗೋವಿಂದ ಮುರಾರೇ ll ಪ ll
ದುರಿತದೂರ ಕರಿವರ ವರದ ಪರಾತ್ಪರ l
ಪರಮಪುರುಷ ನಿರುಪಮ ನರಹರೇ ll 1 ll
ಅಜಭವ ದೈವತ ಕರುಣಾಕರ l
ವ್ರಜವನಿತೇಶ ಗೋವಿಂದ ಮಾಯಾಚ್ಯುತ ll 2 ll
ಮತಿಜನ ವನಚರ ಪ್ರತಿಪಾಲನಾ l
ಘನ ಚಿನ್ಮಯಧವ ದಾನುಜಾಸೂದನಾ ll 3 ll
ಭವ ಭಯಹಾರಕ ಭುವನಾಧೀಶ್ವರ l
ಪರಪುರುಷ ವಿಭವ ಶುಭದಾಯಕ ll 4 ll
ಪಂಕಜನಾಭ ಅಕಳಂಕ ಚರಿತ ಮೀ l
ನಾಂಕ ಜನಕ ಶ್ರೀ ವೇಂಕಟವಿಟ್ಠಲ ll 5 ll
***