Showing posts with label ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ mahipati. Show all posts
Showing posts with label ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ mahipati. Show all posts

Wednesday, 1 September 2021

ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ ankita mahipati

 


ಕಾಖಂಡಕಿ ಶ್ರೀ ಮಹಿಪತಿರಾಯರು

ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ ಪ 

ಉರಗಾ ಹರಿಧ್ವಜಪಿತನಾ | ಅರಿಪಿತ ಸಂಹಾರಕನಾ | ಗಿರಿಜಾವಲ್ಲಭರಿಯನಾ | ಶರಗರ್ಭನನುತನ ತೋರೆ 1

 ಶೂರರಾಯನಂದನಾ | ಅರಸಿ ಯಣ್ಣನ ಮದನನಾ | ಮೈರೋಚನ ಆತ್ಮಜನಾ | ವರದನ ತಂದು ತೋರೆ 2 

ಗಿರಿ ರಿಪುತನು ಸಂಭವನಾ | ಅರಸಿಯಣ್ಣನನುಜನಾ | ಗುರುವರ ಮಹಿಪತಿ ಪ್ರೀಯನಾ | ಹರಿಣಾನೇತ್ರನೀ ತೋರೆ 3

****