kruti by shreesha keshava dasaru
on ರಾಘವೇಂದ್ರ
ಚರಣಕಮಲಯುಗಕೆ ನಮಿಪೆ ನಿರುತವನುದಿನ |
ಶ್ರೀ ರಾಘವೇಂದ್ರ ಪ
ಶ್ರೀ ರಾಘವೇಂದ್ರ ಪ
ಪರಿಪರಿ ಶರಣರ ಪೊರೆಯುವ
ಕರುಣಾಸಾಂದ್ರ ಯತಿಕುಲೇಂದ್ರ ಅ.ಪ
ವೇನಮತವಿದಾರ ಸುಂದರಜ್ಞಾನದಾತ ಗುರುವರ |
ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1
ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ |
ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2
ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು |
ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3
ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ |
ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4
ಶ್ರೀಶಕೇಶವಾಂಘ್ರಿದೂತ ದಾಸಜನನುತ |
ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
***
ಚರಣಕಮಲಯುಗಕೆ ನಮಿಪೆ ನಿರುತವನುದಿನ |
ಶ್ರೀ ರಾಘವೇಂದ್ರ || PA ||
ಪರಿಪರಿ ಶರಣರ ಪೊರೆಯುವ
ಕರುಣಾಸಾಂದ್ರ ಯತಿಕುಲೇಂದ್ರ || A PA ||
ವೇನಮತವಿದಾರ ಸುಂದರಜ್ಞಾನದಾತ ಗುರುವರ |
ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ || 1 ||
ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ |
ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ || 2 ||
ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು |
ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ || 3 ||
ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ |
ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ || 4 ||
ಶ್ರೀಶಕೇಶವಾಂಘ್ರಿದೂತ ದಾಸಜನನುತ |
ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ || 5 ||
***
Caraṇakamalayugake namipe nirutavanudina | śrī rāghavēndra || PA ||
paripari śaraṇara poreyuva karuṇāsāndra yatikulēndra || A PA ||
vēnamatavidāra sundarajñānadāta guruvara | śrīnāthana padapaṅkajadhyānanirata suguṇabharita || 1 || madhvaśāstrapaṭhisi bahuprasid’dhaṭīke racisuta | sadvaiṣṇava sid’dhāntavē śud’dhavenisi mereda dhīrā || 2 ||
narahari sirirāmakr̥ṣṇa varavēdavyāsaru | irutiruvaru ninnoḷu tava parijana sēvegaḷa koḷuta || 3 ||
vārāhi sukṣētranilaya cārucarita guṇamaya | ārādhipa dīnāḷige sārasaukhyavīva kāva || 4 ||
śrīśakēśavāṅghridūta dāsajananuta | lēsāgiha bhūsura sahavāsavittu karuṇisayya || 5 ||
Plain English
Caranakamalayugake namipe nirutavanudina | sri raghavendra || PA ||
paripari saranara poreyuva karunasandra yatikulendra || A PA ||
venamatavidara sundarajnanadata guruvara | srinathana padapankajadhyananirata sugunabharita || 1 || madhvasastrapathisi bahuprasid’dhatike racisuta | sadvaisnava sid’dhantave sud’dhavenisi mereda dhira || 2 ||
narahari siriramakrsna varavedavyasaru | irutiruvaru ninnolu tava parijana sevegala koluta || 3 ||
varahi suksetranilaya carucarita gunamaya | aradhipa dinalige sarasaukhyaviva kava || 4 ||
srisakesavanghriduta dasajananuta | lesagiha bhusura sahavasavittu karunisayya || 5 ||
***
ankita ಶ್ರೀಶಕೇಶವ
ರಾಗ: ಹಂಸಧ್ವನಿ / ಕಾನಡ ತಾಳ: ರೂಪಕ
ಚರಣಕಮಲಯುಗಕೆ ನಮಿಪೆ ನಿರುತವನುದಿನ
ಶ್ರೀ ರಾಘವೇಂದ್ರ ಪ
ಪರಿಪರಿ ಶರಣರಪೊರೆಯುವ
ಕರುಣಾಸಾಂದ್ರ ಯತಿಕುಲೇಂದ್ರ ಅ.ಪ
ವೇನಮತವಿದಾರ ಸುಂದರe್ಞÁನದಾತ ಗುರುವರ
ಶ್ರೀನಾಥನ ಪದಪಂಕಜ ಧ್ಯಾನ ನಿರತ ಸುಗುಣಭರಿತ 1
ಮಧ್ವಶಾಸ್ತ್ರ ಪಠಿಸಿ ಬಹು ಪ್ರಸಿದ್ಧ ಟೀಕೆ ರಚಿಸುತ
ಸದ್ವೈಷ್ಣವಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರ 2
ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು
ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ 3
ವಾರಾಹಿಸುಕ್ಷೇತ್ರನಿಲಯ ಚಾರುಚರಿತ ಗುಣಮಯ
ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4
ಶ್ರೀಶಕೇಶವಾಂಘ್ರಿದೂತ ದಾಸಜನನುತ
ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
***