Showing posts with label ಹೇಗೆ ಮಾಡಬೇಕೋ ವಿಠಲ ತಂದೆ purandara vittala. Show all posts
Showing posts with label ಹೇಗೆ ಮಾಡಬೇಕೋ ವಿಠಲ ತಂದೆ purandara vittala. Show all posts

Saturday, 7 December 2019

ಹೇಗೆ ಮಾಡಬೇಕೋ ವಿಠಲ ತಂದೆ purandara vittala

ರಾಗ ಕಮಾಚ್. ಆದಿ ತಾಳ

ಹೇಗೆ ಮಾಡಬೇಕೋ ವಿಠಲ ತಂದೆ , ಹೇಗೆ ಮಾಡಬೇಕೋ ||ಪ||
ಹೇಗಾದರು ದುರಿತಗಳೆನ್ನ ಕಾಡದ , ಹಾಗೆ ಮಾಡಬೇಕೋ ||ಅ||

ಇಂದಿನ ನರಜನ್ಮವೋ ನಿನ್ನ ಕೃಪೆಯಿಂದ ದೊರಕಿತಲ್ಲೊ
ಮುಂದೆನ್ನ ತಾಯ ಗರ್ಭದಿಂದ ಜನಿಸಿದ ಹಾಗೆ ಮಾಡಬೇಕೋ ವಿಠಲ ತಂದೆ ||

ನಿನ್ನನು ಬೇಡುವುದೆ ದುಷ್ಕರ್ಮದ ಹಾನಿಯೊಂದೆ ಸಾಲದೆ
ಹೀನ ಮಾನವರಿಗೆ ನಾ ಕೈ ಜೋಡಿಸದ್ಹಾಂಗೆ ಮಾಡಬೇಕೋ ವಿಠಲ ತಂದೆ ||

ಕರುಣಿಸೋ ಪುರಂದರವಿಠಲ ತಂದೆ ಮರೆಹೊಕ್ಕೆನೊ ಪೂರಾ
ಶರಣಾಗತವತ್ಸಲನೆಂಬೊ ಬಿರುದುಳ್ಳ ಹಾಂಗೆ ಮಾಡಬೇಕೋ ವಿಠಲ ತಂದೆ ||
***

pallavi

hEgE mADabEkO viTTala tande hEgE mADabEkO

anupallavi

hEgAdaru duritagaLenna kADada hAge mADabEkO

caraNam 1

indina narajanmavO ninna krpeyinda dorakitallo munnendena
tAya garbadinda janisida hAge mADa bEkO viTTala tande

caraNam 2

ninnu bEDuvude duSkarmada hAniyonde sAlade hIna
mAnavarige nA kai jODi sadhAnge mADa bEkO viTTala tande

caraNam 3

karuNisO purandara viTTala tande mare hokkeno purA sharaNAgata
vatsalanembo biruduLLa hAnge mADa bEkO viTtala tande
***