Showing posts with label ತೆಪ್ಪದುತ್ಸವ ನಿನಗೆ ಏನು ಹಿತವೋ ಅಪ್ಪ ಹನುಮಯ್ಯ gopalakrishna vittala. Show all posts
Showing posts with label ತೆಪ್ಪದುತ್ಸವ ನಿನಗೆ ಏನು ಹಿತವೋ ಅಪ್ಪ ಹನುಮಯ್ಯ gopalakrishna vittala. Show all posts

Monday, 2 August 2021

ತೆಪ್ಪದುತ್ಸವ ನಿನಗೆ ಏನು ಹಿತವೋ ಅಪ್ಪ ಹನುಮಯ್ಯ ankita gopalakrishna vittala

ತೆಪ್ಪದುತ್ಸವ ನಿನಗೆ ಏನು ಹಿತವೋ

ಅಪ್ಪ ಹನುಮಯ್ಯ ನಿನ್ನಾಟಕೇನೆಂತೆಂಬೆ ಪ.


ರಾಮ ಉಂಗುರ ಸತಿಗೆ ಕಂಡಿತ್ತು ಬಾರೆನಲು

ನೇಮದಿಂದಲಿ ನೂರು ಯೋಜನುದಧಿ

ಪ್ರೇಮದಿಂದಲಿ ಹಾರಿ ಕುರುಹು ತಂದಾ ಮಹಿಮ

ಈ ಮಡುವಿನ ಜಲದಿ ಈ ಆಟವಾಡುವುದು 1

ಕುರುಕುಲಾರ್ಣವವೆಂಬ ಘನ ಶತ್ರು ಸೈನ್ಯವನು

ಒರಸಿ ಕ್ಷಣದಲಿ ಭುಜಬಲದ ಶೌರ್ಯದಲಿ

ಧುರವೆಂಬ ಶರಧಿಯನು ಲೀಲೆಯಲಿ ದಾಟಿದಗೆ

ವರ ಸರೋವರದ ಈ ಜಲದಾಟವಾಡುವುದು 2

ಅನ್ಯ ದುರ್ಮತ ಮಹಾರ್ಣವನು ಶೋಷಿಸುತ ಬಹು

ಉನ್ನತದ ವೇದ ಶಾಸ್ತ್ರಾರ್ಣವದಲಿ

ಚೆನ್ನಾಗಿ ಈಜಿ ಶ್ರೀ ಹರಿಚರಣ ದಡ ಸೇರ್ದ

ಘನ್ನ ಮಹಿಮನಿಗೆ ಈ ಚಿನ್ನ ಮಡುವೀಜುವುದು 3

ಮುಕ್ತಿಯೊಗ್ಯರ ಕರ್ಮಶರಧಿಯನು ದಾಟಿಸುತ

ಮುಕ್ತರಾಶ್ರನ ಪುರ ಸೇರಿಸುವನೆ

ಅತ್ಯಂತ ಅಲ್ಪ ಈ ಜಲದಾಟವಾಡಿದರೆ

ಭಕ್ತರಾದಂತ ದಾಸರು ನಗರೆ ಹನುಮ 4

ವರ ಕದರುಂಡಲಿಯಲ್ಲಿ ನೆಲಸಿರುವ ಭಕ್ತರಿಗೆ

ಮರುಳುಗೊಳಿಸುತ ಮಹಾ ಮಹಿಮನೆನಿಸಿ

ಪರಿಪರಿಯ ಉತ್ಸವಪಡುವೆ ಶ್ರೀ ಕಾಂತೇಶ

ಸಿರಿರಮಣ ಗೋಪಾಲಕೃಷ್ಣವಿಠ್ಠಲನ ದಾಸ 5

****