Showing posts with label ನೋಡಿದೆ ವೇಂಕಟ ನಿನ್ನ ನೋಡಿದೆ ನೋಡಿದೆ ವೇಂಕಟ ನಿನ್ನ gurujagannatha vittala. Show all posts
Showing posts with label ನೋಡಿದೆ ವೇಂಕಟ ನಿನ್ನ ನೋಡಿದೆ ನೋಡಿದೆ ವೇಂಕಟ ನಿನ್ನ gurujagannatha vittala. Show all posts

Wednesday, 1 September 2021

ನೋಡಿದೆ ವೇಂಕಟ ನಿನ್ನ ನೋಡಿದೆ ನೋಡಿದೆ ವೇಂಕಟ ನಿನ್ನ ankita gurujagannatha vittala

 ..

ನೋಡಿದೆ ವೇಂಕಟ ನಿನ್ನ ನೋಡಿದೆ

ನೋಡಿದೆ ವೇಂಕಟ ನಿನ್ನ ಪ


ಕೊಂಡಾಡಿ ಬೇಡಿದೆ ವರವನ್ನ ಆಹಾ

ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ

ನಾಡುದೈವಗಳೆಲ್ಲ ಒಡಿಪೋದವೊ ಸ್ವಾಮಿ ಅ.ಪ


ಮಣಿಗಣಮಯದ ಕಿರೀಟ, ಕಪ್ಪುವ

ರಣಕುಂತಲದ ಲೋಲ್ಯಾಟ, ಯುಗತ

ರಣಕುಂಡಲ ಬಹು ಮಾಟ ಅರ

ಗಿಣಿ ಶÀಶಿಪೋಲ್ವ ಲಲಾಟ ಆಹಾ

ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ

ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ 1


ವಾರಿಜಯುಗಸಮನಯನ, ನಾಸ

ಚಾರುಚಂಪಕ ತೆನೆ, ವದನದೊಳು

ತೋರುವ ಸುಂದರರದನ ಪಂಕ್ತಿ

ಸಾರಿದಾಧರ ಬಹು ಅರುಣ, ಆಹಾ

ಸಾರಸಮುಖದೊಳು ಸೇರಿ ಶೋಭಿಪ ಚುಬಕ

ಕೂರುಮಯುಗಕದಪು ಸಾರಕಟಾಕ್ಷವ 2


ಕಂಧರಾಂಕಿತ ಸತ್ರಿರೇಖಾ, ಕಂಠ

ಪೊಂದಿಪ್ಪೊದ್ವರ್ತುಲ ಕ್ರಮುಕ, ಕೊರಳ

ಸುಂದರಕೌಸ್ತುಭಪದಕ, ಬಹು

ಬಂಧುರ ಚೆÉೈತ್ರ ಸುರೇಖ ಆಹಾ

ಹಿಂದೆ ಸಿಂಹÀದ ಹೆÉಗಲಿನಂದದಲೊಪ್ಪಿದ

ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು 3


ಸ್ವನ್ನ ಏಕಾವಳಿಹಾರಾ, ಬಾ

ವನ್ನ ಪುತ್ಥಳಿ ಸಿರಿಯಾಕಾರ, ಬಹು

ಚನ್ನವಾಗಿಹ ನಾನಾಹಾರ, ಶುಭ್ರ

ವರ್ಣ ಶೋಭಿಪ ಜನಿವಾರ ಆಹಾ

ಇನ್ನು ಗುಂಡಿನಮಾಲೆ, ಘನ್ನ ಜಲಸರಪಳಿ

ಉನ್ನತದಾನಘ್ರ್ಯ ರನ್ನ ಜಯಂತಿಯಾ 4


ಶಿರಿವತ್ಸಲಾಂಛನಹೃದಯ, ಸುರ

ಕರಿಕರತೆರಬಾಹು ಶಿರಿಯಾ, ನಾಲ್ಕು

ಕರಗಳೊಪ್ಪವವೀಪರಿಯ, ಮೇಲಿ

ನ್ನೆರಡು ಹಸ್ತದಿ ಶಂಖ ಅರಿಯ ಆಹಾ

ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ

ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು 5


ಪರಮವೈಕುಂಠದಕಿಂತ ಈ

ಧರಿತಳವದಿಕವೆನ್ನು ತಾ ಬಲ

ಕರದಿಂದ ಜನಕೆ ತೋರುತಾ ಬಾಹು

ಎರಡು ಆಜಾನುಪೂರಿತಾ ಆಹಾ

ಸ್ವರಣರತ್ನ ಖಚಿತ ವರನಾಗಭೂಷಣ

ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು 6


ಹಸ್ತಯುಗದಿ ತೋಡ್ಯ ಕಡಗ, ಪ್ರ

ಶಸ್ತ ರತ್ನದ್ಹರಳಸಂಘ ರಚಿತ

ಸಿಸ್ತಾದÀ ಉಂಗುರ ಬೆಡಗ, ಬಹು

ವಿಸ್ತರಾಂತರ ಭುಜಯುಗ ಆಹಾ

ಹಸ್ತಿವರದ ಸಮಸ್ತಲೋಕಕೆ ಸುಖ

ವಿಸ್ತಾರ ನೀಡುತ ಸಿಸ್ತಾದ ದೇವನ 7


ಉದರ ತ್ರಿರೇಖ ರೋಮಾಳಿನಾಭಿ

ಪದುಮ ಶೋಭಿಪ ಗುಂಭಸುಳಿ ಮೇಲೆ

ಉದಯಾರ್ಕ ಪೋಲುವ ಕಲೆ ಇಂದ

ಸದಮಲಾಂಬರಪಟಾವಳಿ ಆಹಾ

ಬಿದುರಶೋಭಿüತ ಮಹಾಚÀದುರದೊಡ್ಯಾಣವು

ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು 8


ಕುಂಭಿಮಸ್ತಕದೋಲ್ನಿತಂಬ, ದಿಂದ

ರಂಭೆ ಪೋಲುವ ಊರುಸ್ತಂಭ, ಇಂದು

ಬಿಂಬವೆನಿಪ ಜಾನು, ಡಿಂಬ ಭಕ್ತ ಕ

ದಂಬ ಮೋಹಿಪ ವಿಡಂಬ ಆಹಾ

ಅಂಬುಜಾಸನಪಿತನ ತುಂಬಿದ ಮೀನ್ಜಂಘ

ನಂಬಿದ ಜನರನ್ನ ಇಂಬಾಗಿ ಸಲಹೋನಾ 9


ಪರಡೆರಡು ಮಾಣಿಕ್ಯಾವರಣ, ಪೊಳೆವ

ಕಿರುಗೆಜ್ಜೆನೂಪುರಾಭರಣ ಇಟ್ಟು

ಮೆರೆವೊ ಗಂಗೆಯ ಪೆತ್ತ ಚರಣ ಯುಗ

ನಿರುತ ಭಜಿಪರೊಳತಿ ಕರುಣ ಆಹಾ

ಮರೆಯದೆ ಮಾಡುತ ಪರಿಪರಿ ಸೌಖ್ಯವ

ಕರೆದುನೀಡುವನಹಿಗಿರಿವಾಸ ಶ್ರೀಶÀನ್ನ 10


ಪೋತೇಂದು ನಖಯುತ ಬೆರಳ ಸಾಲು

ದೂತತತಿಗೆ ಸುಖಗಳನಿತ್ತು

ನೀತಙÁ್ಞನ ಭಕ್ತಿಗಳ ನಿತ್ಯ

ಪ್ರೀತಿಪಡೆಯೆ ಮುಕ್ತಿಗಳ ಆಹಾ

ವಾತಗುರುಜಗನ್ನಾಥವಿಠಲನತಿ

ಪ್ರೀತಿಂದ ಪುರುಷಾರ್ಥದಾತನಾದುದು ನಿತ್ಯ 11

***

pallavi


nODide vEnkaTa ninna nODide nODide vEnkaTa ninna


anupallavi


koNDADi bEDIde varavanna AhA rUDhiyoLage ninage IDugANeno dEva nADudaivagaLella oDipOdavo svAmi


caraNam 1


maNigaNamayada kirITa kappuva raNakuntalada lOlyATa yugata raNakuNDala bahu mATa ara

giNi shashipOlva lalATa AhA eNegANe kastUri maNidirpa bhrUyuga kuNiyuta smaradhanu gaNisado elOdEvA


caraNam 2


vArija yuga sama nayana nAsa cArucampaka tene vadanadoLu tOruva sundararadana pankti

sAridAdhara bahu aruNa AhA sArasamukhadoLu sEri sObhipa cubaka kUrumayugakadapu sAra kaTAkSava


caraNam 3


kandharAnkita satrirEkhA kaNTha pondippodvaturla krayuka kOraLa sundara kaustubha padaka bahu

bandhura caitra surEkha AhA hinde simhada hegalinandadaloppida skandhadi sObhipa ondu sarigeyannu


caraNam 4


svanna EkAvaLihArA bAvanna putthaLi siriyAkAra bahu cannavAgiha nAnAhAra subhra

vaNarsObhipa janivAra AhA innu guNDinamAle ghanna jalasarapaLi unnatadAnaghya.r ranna jayantiyA


caraNam 5


sirivatsalAnchana hridaya sura karikaraterabAhu shiriyA nAlku karagaLOppavavEpariya mEli-

nneradu hastadi shMkha ariya AhA vararatna mudrike dharisida beraLuLLa karatODa kaDagakke sarigANe dhareyoLu


caraNam 6


paramavaikuNThadakinta I dharitaLavadikavennu tA bala karadinda janake tOrutA bAhu

eraDu AjAnupUritA AhA svaraNaratna kacita vara nAgabhUSaNa dharisi Tonkadi vAmakaraviTTu merevOdu


caraNam 7


hastayugadi tODya kaDaga prashasta ratnad haraLasangha racita sistAda ungura beDaga bahu

vistarAntara bhujayuga AhA hastivarada samastalOkake sukha vistAra nIDuta sistAda dEvana


caraNam 8


udara trirEkha rOmALinAbhi paduma shObhipa gumbhasuLi mEle udayAkar pOluva kale inda

sadamalAmbarapaTAvaLi AhA bidurashObhita mahA caturadODyANavu padaka muttina tudi vidhavidha poLevOdu


caraNam 9


kumbhimastakadOlnitamba dinda rambhe pOluva Urustambha indu bimbavenipa jAnu, Dimba bhakta

kadamba mOhipa viDamba AhA ambujAsanapitana tumbida mInjangha nambida janaranna imbAgi salahOnA


caraNam 10


paraDeraDu mANikyAvaraNa poLeva kirugejjenUpurAbharaNa iTTu merevo gangeya petta caraNa yuga

niruta bhajeparoLati karuNa AhA mareyade mADuta paripari saukhyava karedunIDuvanahigirivAsa shrIshanna


caraNam 11


pOtEndu nakhayuta beraLa sAlu dUtatatige sukhagaLanittu nItajnAna bhaktigaLa

nitya prItipaDeye muktigaLa AhA vAtagurujagannAthaviThalanati prItinda puruSAtha.rdAtanAdudu nitya

***