Showing posts with label ಏನೇನು ಮಾಡಿದರೇನು ಫಲವಯ್ಯ purandara vittala. Show all posts
Showing posts with label ಏನೇನು ಮಾಡಿದರೇನು ಫಲವಯ್ಯ purandara vittala. Show all posts

Tuesday, 3 December 2019

ಏನೇನು ಮಾಡಿದರೇನು ಫಲವಯ್ಯ purandara vittala

ರಾಗ ಮೋಹನ. ತ್ರಿಪುಟ ತಾಳ

ಏನೇನು ಮಾಡಿದರೇನು ಫಲವಯ್ಯ||ಪ||

ಭಾನುಕೋಟಿ ತೇಜ ಶ್ರೀನಿವಾಸನ್ನ ಭಜಿಸದೆ ||ಅ||

ಹಲವು ಓದಿದರೇನು
ಕೆಲವು ಕೇಳಿದರೇನು
ಜಲದೊಳಗೆ ಮುಳುಗಿ ಕುಳಿತಿದ್ದರೇನು
ಛಲವಾಗಿ ಮುಸುಕಿಟ್ಟು ಬೆರಳನೆಣಿಸಿದರೇನು
ಚೆಲುವ ದೇವನೊಳು ಎರಕವಿಲ್ಲದ ತನಕ ||

ಅನ್ನ ಜರಿದು ಅರಣ್ಯ ಚರಿಸಿದರೇನು
ಉನ್ನತ ವ್ರತಗಳಾಚರಿಸಿದರೇನು
ಚೆನ್ನೆಗಾತಿಯರ ಸಂಗ ಬಿಟ್ಟು ಇದ್ದರೇನು
ಗಾನಲೋಲನಲ್ಲಿ ಎರಕವಿಲ್ಲದನಕ ||

ಬತ್ತಲೆ ತಿರುಗಿ ಅವಧೂತನೆನಿಸಿದರೇನು
ತತ್ವವಾಕ್ಯಂಗಳ ಪೇಳಿದರೇನು
ಚಿತ್ತಜನಯ್ಯ ಶ್ರೀಪುರಂದರವಿಠಲನ್ನ
ಚಿತ್ತದೊಳಿರಿಸಿ ಒಲಿಸಿಕೊಳ್ಳುವತನಕ(/ಒಲಿಸಿಕೊಳ್ಳದತನಕ) ||
***

pallavi

EnEnu mADidarEnu balavayya

anupallavi

bHanukOTi tEja shrInivAsanna bhajisade

caraNam 1

halavu OdidarEnu kulavu kELidarEnu jaladoLage muLugi kuLitiddarEnu
chalavAgi musugiTTu beraLaneNisidarEnu celuva dEvanoLu eragavillada tanaka

caraNam 2

anna jaredu araNya saridarEnu unnata vratagaLAcarisidarEnu
cenne gAtiyara sanga biTTu iddarEnu gAnalOlanalli eragavilladanaka

caraNam 3

battale tirugi avadhUtanenisidarEnu tatva vAkyagaLa pELidarEnu
citta janayya shrI purandara viTTalanna cittadoLirisi olisi koLLuva tanaka
***