Showing posts with label ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ vijaya vittala SAADHANAKKE BAGEGAANENENNABAHUDE SAADARADI. Show all posts
Showing posts with label ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ vijaya vittala SAADHANAKKE BAGEGAANENENNABAHUDE SAADARADI. Show all posts

Saturday, 25 December 2021

ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ankita vijaya vittala SAADHANAKKE BAGEGAANENENNABAHUDE SAADARADI

Nagaratnamma Madam
vijayadasara aradhane celebrations in Mysuru Karteeka Masa 2018
 

ಸಾಧನಕ್ಕೆ ಬಗೆಗಾಣೆನೆನ್ನಬಹುದೆ
ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ

ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ
ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
ಹಿಂಡು ಮಾತುಗಳೆಲ್ಲ ಹರಿಯ ನಾಮ 1

ವಾಗತ್ಯಪಡುವದೆ ವಿಧಿನಿಷೇಧಾರಚರಣೆ
ರೋಗಾನುಭವವೆಲ್ಲ ಉಗ್ರತಪವು
ಆಗದವರಾಡಿಕೊಂಬುವುದೆ ಆರ್ಶೀವಾದ
ಬೀಗುರುಪಚಾರವೇ ಭೂತದಯವು 2

ಮೈಮರೆತು ಮಲಗುವುದೆ ಧರಣಿ ನಮಸ್ಕಾರ
ಕೈಮೀರಿ ಹೋದದ್ದೆ ಕೃಷ್ಣಾರ್ಪಣ
ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3

ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ
ನಡೆದಾಡುವೋದೆಲ್ಲ ತೀರ್ಥಯಾತ್ರೆ
ಬಡತನವು ಬರಲದೇ ಭಗವದ್ಭಜನೆಯೋಗ
ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ4

ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು
ಯದೃಚ್ಛಾಲಾಭವೇ ಸುಖವುಯೆನಲು
ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ
ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
*********