Showing posts with label ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ ಗುರುನಾಮ mahipati. Show all posts
Showing posts with label ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ ಗುರುನಾಮ mahipati. Show all posts

Wednesday, 1 September 2021

ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ ಗುರುನಾಮ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ ಗುರುನಾಮ ನಿಧಾನಿರಲಿಕ್ಕೆ ನನಗಿಲ್ಲೆಂಬುವದ್ಯಾಕೆ ಪ  


ಅನುದಿನ ಎನಗಿರೆ ಅನುಕೂಲದ ಚಿಂತ್ಯಾಕೆ ತನುಮನದೊಳು ತಾನೆತಾನಿರಲು ಅನುಮಾನಿಸಲಿನ್ಯಾಕೆ 1 

ದಾತನೊಬ್ಬ ಶ್ರೀನಾಥೆನಗಿರಲು ಯಾತಕೆ ಪರರ ದುರಾಸೆ ಮಾತುಮಾತಿಗೆ ತೋರುವ ಸದ್ಗುರು ತೇಜೋಪುಣ್ಯದ ರಾಶಿ 2 

ಲೇಸಾಗೆನಗಿರೆ ಭಾಸ್ಕರ ಗುರುದಯೆ ವೇಷದೋರುವದಿನ್ಯಾಕೆದಾಸ ಮಹಿಪತಿಗ್ಯನುದಿನ ಭಾಸುತಲಿರೆ ಕಾಸಿನ ಕಳವಳಿಕ್ಯಾಕೆ 3

***