ಯಾಕೆದೂರುವಿರೆಂಮ ಬಾಲನಾ
ಲೋಕದೊಳಿವನಂಥ ಪುಂಡು ಮಕ್ಕಳಿಲ್ಲವೆಂದು ಪ.
ಒಂದು ಹೆಜ್ಜೆಯನಿಡವಲ್ಲಿ ಬೀಳುತಲಿಹನೆ
ನಿಂದಿಹವದನ್ನು ನಾ ಕಾಣೆ ಅ.ಪ.
ಇಂದು ನಮ್ಮಯ ಮನೆವೊಕ್ಕು ಬೆಣ್ಣೆಯ ಸವಿದನೆಂಬುದು
ಛಂದವೇನೆ ಗೋಪಿ ನಿನ್ನ ಕಂದನ ಸರಿಯಲ್ಲವೆ 1
ಅನ್ನವನುಣ್ಣಲರಿಯ ಅಮ್ಮಿಬೇಡುತಲಿಹನೆ
ಸೊನ್ನಿಮಾಡಿ ಕರದನೆಂಬೋದು ಸೊಲ್ಲು ಸರಿಯೇ ಗೋಪಿ 2
ಬಲುಹಿಂದ ಹಾಲನೆರೆಯೆ ಬಾಯತೆಗಿಯಲೊಲ್ಲ ಒಲೆಯ
ಮೇಲಿನಹಾಲ ಒಬ್ಬನೆ ಕುಡಿದಾನೆಂದು ಹೆಳವನಕಟ್ಟೆ
ರಂಗನಾ ದೂರುವುದೊಳಿತೆ 3
***