by ಪ್ರಸನ್ನವೆಂಕಟದಾಸರು
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯ ಪ.
ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1
ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2
ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3
ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4
ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5
ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6
ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7
ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8
ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9
ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10
ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11
ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12
ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13
ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14
ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15
ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16
ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17
ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18
ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19
ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20
ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
********