ರಾಘವೇಂದ್ರರ ಸ್ಮರಣೆ
ರಚನೆ : ಶ್ರೀಕರವಿಠ್ಠಲದಾಸರು
ಕಾಯೋ ಮಂತ್ರ ಮುನಿರಾಯ ನಿರಂತರ!
ಕಾಯೊ ಎನ್ನ ಶುಭ ಕಾಯೊ!!ಪ!!
ಖುಲ್ಲನಿನ್ನಹರಿ ಎಲ್ಲಿಹ ತೊರನೆ !
ಅಲ್ಲೆ ಸ್ತಂಭದಲಿ ತೋರ್ದೆ!!೧!!
ತಾಳಗತಿಗೆ ಕೃಷ್ಣಲೀಲೆಯಿಂದಲಿ ಕುಣಿದ!
ಶೀಲ ನಿನ್ನಲಿ ದಯವೆಂತೊ!!೨!!
ಮಾರುತ ಶುಭಮತ ವಾರಿಧಿ ಚಂದಿರ!
ಸೂರಿವರ್ಯ ರಾಘವೇಂದ್ರಾ!!೩!!
ರಾಮನ ಪದಯುಗ ನೇಮದಿ ಭಜಿಸುವ!
ಹೇಮಮ ಸ್ವಾಮಿ ಕೃಪಾಳೊ!!೪!!
ಈ ಸಮಯದಿ ಯನ್ನ ನೀ ಸಲಹುವದಯ್ಯಾ!
ಶ್ರೀಶ ಶ್ರೀಕರವಿಠಲ ಪ್ರೀಯಾ!!೫!!
***
ರಾಗ: ಪೀಲು ತಾಳ: ಕೇರವ (raga, taala may differ in audio)
ಕಾಯೊ ಮಂತ್ರಮುನಿರಾಯ ನಿರಂತರ
ಕಾಯೊ ಎನ್ನ ಶುಭಕಾಯ ಪ
ಖುಲ್ಲ ನಿನ್ನ ಹರಿ ಎಲ್ಲಿಹ ತೋರೆನೆ
ಅಲ್ಲೆ ಸ್ತಂಭದಲಿ ತೋರ್ದೆ 1
ತಾಳಗತಿಗೆ ಕೃಷ್ಣ ಲೀಲೆಯಿಂದಲಿ ಕುಣಿದ
ಶೀಲ ನಿನ್ನಲಿ ದಯವೆಂತೊ 2
ಮಾರುತಶುಭಮತವಾರಿಧಿಚಂದಿರ
ಸೂರಿವರ್ಯ ರಾಘವೇಂದ್ರ 3
ರಾಮನ ಪದಯುಗ ನೇಮದಿ ಭಜಿಸುವ
ಹೇ ಮಮಸ್ವಾಮಿ ಕೃಪಾಳೊ 4
ಈ ಸಮಯದಿ ಎನ್ನ ನೀ ಸಲಹುವುದಯ್ಯ
ಶ್ರೀಶಶ್ರೀಕರವಿಠಲಪ್ರಿಯ 5
***