Showing posts with label ಮನಸಿನ ಮಾಯವೆ ಗೂಢದೋರದು ನಿಜ ಗೂಢ mahipati. Show all posts
Showing posts with label ಮನಸಿನ ಮಾಯವೆ ಗೂಢದೋರದು ನಿಜ ಗೂಢ mahipati. Show all posts

Wednesday, 1 September 2021

ಮನಸಿನ ಮಾಯವೆ ಗೂಢದೋರದು ನಿಜ ಗೂಢ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನಸಿನ ಮಾಯವೆ ಗೂಢದೋರದು ನಿಜ ಗೂಢ ಪ  


ಮರವಿನೊಳಾಡಲು ಆಯಿತು ಮನವು ಅರಿವಿನೊಳಾಡಲು ತೋರಿತುನ್ಮನವು ಅರಹು ಮರುಹ ಎರಡನೆ ಮೀರಿದರೆ ಆಯಿತು ತನ್ನೊಳು ತಾನೆ ಚಿದ್ಘನವು 1 

ಅರುಹಿತು ಸ್ಥೂಲಕೆ ಜಾಗ್ರತಿಯಾಗಿ ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ ಕಾರಣದಲಿ ಸಷುಪ್ತಿಯು ಆಗಿ ತೋರಿತು ತಾನೆ ಮೂರು ಪರಿಯಾಗಿ 2 

ದೊರಕುದು ಬ್ರಹ್ಮಾಧಿಕರಿಗೆ ಖೂನ ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ ತರಳ ಮಹಿಪತಿಗಾಯಿತುನ್ಮನ 3

***