ಕಾಖಂಡಕಿ ಶ್ರೀ ಮಹಿಪತಿರಾಯರು
ಮನಸಿನ ಮಾಯವೆ ಗೂಢದೋರದು ನಿಜ ಗೂಢ ಪ
ಮರವಿನೊಳಾಡಲು ಆಯಿತು ಮನವು ಅರಿವಿನೊಳಾಡಲು ತೋರಿತುನ್ಮನವು ಅರಹು ಮರುಹ ಎರಡನೆ ಮೀರಿದರೆ ಆಯಿತು ತನ್ನೊಳು ತಾನೆ ಚಿದ್ಘನವು 1
ಅರುಹಿತು ಸ್ಥೂಲಕೆ ಜಾಗ್ರತಿಯಾಗಿ ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ ಕಾರಣದಲಿ ಸಷುಪ್ತಿಯು ಆಗಿ ತೋರಿತು ತಾನೆ ಮೂರು ಪರಿಯಾಗಿ 2
ದೊರಕುದು ಬ್ರಹ್ಮಾಧಿಕರಿಗೆ ಖೂನ ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ ತರಳ ಮಹಿಪತಿಗಾಯಿತುನ್ಮನ 3
***
No comments:
Post a Comment