..
kruti by bhupati vittalaru ( kakhandaki Ramacharyaru)
ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡುಬಂದ ಕಾರಣ ತಿಳಿಯದೋಹೆಂಡತಿಯ ಕಾಟವೊ ಇದು ನಿನ್ನ ಆಟವೊಭಕ್ತಭೂಮಿಗೆ ಓಟವೊಪಂಢರಿಯ ಬಿಟ್ಟಿಲ್ಲಿ ಬಂದ ಕಾರಣವೇನುಪೇಶಯ್ಯ ಪಾಂಡುರಂಗಾsಚಂದ್ರಭಾಗಾ ತೀರ ಸುಂದರ ಮಂದಿರವುಇಂದಿರಾರಮಣ ನಿನಗಲ್ಲಿ 1
ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನನವನೀತ ಬಾು ತುಂಬಾsಜರತಾರಿ ಮುಂಡಾಸು ಭರ್ಜರಿ ನಿಲುವಂಗಿಸೊಂಪಿನಂಚಿನ ಮಡಿಯು ನನಗೆತರತರದ ಪುಷ್ಪಗಳು ಎಳೆ ತುಳಸಿ ವನಮಾಲಿಕೊರಳೊಳಗೆ ವೈಜಯಂತಿಪರಿಮಳದ ಗಂಧ ಕಸ್ತೂರಿ ಫಣಿಯಲಿಟ್ಟುವೈಭವದಿ ಪೂಜಿಸುವರು 2
ಅಂದಚೆಂದದ ರತ್ನ ಮುತ್ತಿನಾಭರಣಗಳುತರತರದ ಸೊಗಸಾದ ಪಂಚಪಕ್ವಾನ್ನಗಳುಸರಿಯಾಗಿ ಮಧ್ಯಾಹ್ನ ಮಾಪೂಜೆ ನಡೆಯುವದುಭಕ್ತರಿಗೆ ಲೆಕ್ಕvಲ್ಲಾ sಪಾದಕ್ಕೆ ಹಣೆ ಹಚ್ಚಿ ತಿಕ್ಕುವರು ಮೇಲೆದ್ದುನಿಂತುಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆಭಕ್ತವತ್ಸಲ ವಿಠ್ಠಲಾs 3
ಗೋಧೂಳಿ ಕಾಲಕ್ಕೆ ಪಾದಪೂಜೆಯು ಮಹಾಧೂಪ ದೀಪೋತ್ಸವಗಳುsಆಪಾದಮೌಳಿ ಪರ್ಯಂತ ದರ್ಶನ ಪಾದಸ್ಪರ್ಶದಾ ಆನಂದವೋsರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವುನೋಡಿದವರೇ ಧನ್ಯರುsಸಚ್ಚಿದಾನಂದಮೂರ್ತಿ ಅಲ್ಲಿ ಪ್ರತ್ಯಕ್ಷಭಕ್ತರಿಗೆ ಕಾಣುತಿಹನು 4
ಸತ್ಯವಾದೀ ಜಗಕೆ ಪಂಚಭೇದವು ನಿತ್ಯಸರ್ವತ್ರ ತಾರತಮ್ಯಸೃಷ್ಟ್ಯಾದಿ ಅಷ್ಟ ಕರ್ತೃತ್ವ ವಿಠ್ಠಲಗುಂಟುವಿಠ್ಠಲನೆ ಸವೋತ್ತಮಾsಹರಿಯು ಸರ್ವೋತ್ತಮನು ವಾಯು ಜೀವೋತ್ತಮನುಮೂಲಗುರು ಮುಖ್ಯ ಪ್ರಾಣನುಮಧ್ವಮತವೇ ಮತವು ಸಕಲಶ್ರುತಿಸಮ್ಮತವುನಿತ್ಯ ತತ್ತ್ವಜ್ಞಾನವುs 5
ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನನಿರ್ದೋಷ ನಿರ್ ವಿಕಾರಾsಸರ್ವತಂತ್ರ ಸ್ವತಂತ್ರ ಸರ್ವಾಂತರ್ಯಾಮಿ ಸರ್ವಜ್ಞ ಸರ್ವಸ್ವಾಮಿ ಸಚ್ಚಿದಾನಂದಾತ್ಮ ಪೂರ್ಣಾತ್ಮ ಪರಮಾತ್ಮನಿತ್ಯತೃಪ್ತನು ಶ್ರೀಹರಿsನಿರ್ಗುಣ ನಿರಾಕಾರ ಅಮಿತಗುಣ ಆಕಾರತ್ರಿಗುಣವರ್ಜಿತ ತ್ರಿಧಾಮಾs 6
ಕಾರ್ಯಕಾರಣ ಅಂಶಿ ಅಂಶಾವತಾರಅಂತರ್ಯಾ ಮಿಯಾಗಿ ಇಹನುsಪ್ರೇರ್ಯಪ್ರೇರಕನಾಗಿ ಬಾದ್ಯ ಬಾಧಕನಾಗಿವ್ಯಾಪ್ಯ ವ್ಯಾಪಕನು ತಾನುsಯಾರು ತನ್ನನೆ ನಂಬಿ ಸರ್ವಸ್ವವನು ನೀಡಿದಾಸರಾಗುವರೊ ಅವರನ್ನುsಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿಶ್ರೀಶ ಕೈಪಿಡಿದು ಪೊರೆವಾs 7
ವಿಷ್ಣು ಸರ್ವೋತ್ತಮತ್ವ ತಿಳಿಯದ ಜ್ಞಾನಶೂನ್ಯರಿಗೆಬೇಸತ್ತು ಇಲ್ಲಿ ಬಂದ್ಯಾ sಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿಬಂದದ್ದು ಕೇಳಿ ಬಂದ್ಯಾ sಮಧ್ವಸಿದ್ಧಾಂತ ಪದ್ಧತಿಗೆ ಅನುಸರಿಸಿಪೂಜೆಗೊಂಬಲು ಬಂದೆಯಾsಮುದ್ದುಭೂಪತಿವಿಠಲ ಬಿದ್ದೆ ನಿನಪಾದಕ್ಕೆಉದ್ಧಾರ ಮಾಡೊ ಸ್ವಾಮಿ 8
ಫಲಶ್ರುತಿಚಿತ್ತನಿರ್ಮಲರಾಗಿ ಭಕ್ತಿಭಾವದಿ ನಿತ್ಯವಿಠ್ಠಲಾಷ್ಟಕ ಪಠಿಸಲುವಿಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿಇಷ್ಟಾರ್ಥಗಳ ಕೊಡುವನುsಸತ್ಯ'ೀ ಮಾತಿದಕೆ ಸಾಕ್ಷಿ ಬೇಕಾದರೆಪ್ರತ್ಯಕ್ಷ ಪಾಂಡುರಂಗಾsಕಾವೇರಿ ಶ್ರೀರಂಗ ಕಂಬೆವರದರಾಜಗಲಗಲಿಯ ನರಸಿಂಗನೋs 9
***