..
kruti by pradyumna teertha ಪ್ರದ್ಯುಮ್ನತೀರ್ಥರು
ಪಿಡಿದೆತ್ತೊ ಕೈಯ್ಯಾ ಕೃಷ್ಣಯ್ಯ ಪ
ಪಿಡಿದೆತ್ತೊ ಕೈಯ್ಯಾ ಪಾಲ್ಗಡಲೊಡೆಯನೆ ಭವ
ಕಡಲಿನೊಳಗೆ ಬಿದ್ದು ಬಾಯ್ಬಿಡುವೆ ಬೇಗದಿ ಬಂದು ಅ.ಪ
ತಾವರೆನಾಭಾ ಕಾವದÀು | ಎನ್ನ ಜೀವನಲಾಭಾ
ಶ್ರೀವ್ಯಾಸಮುನಿಗೊಲಿದವ | ನೆಂದರಿತು ಬಂದೆ
ಶ್ರೀವೇಣುಗೋಪಾಲಕೃಷ್ಣ | ಗೋವಳರೊಡೆಯ
ಭಾವ ಭಕುತಿಗಳೊಂದನರಿಯೆನು
ಹೇವವಿಲ್ಲದೆ ದಿನವ ಕಳೆದೆನು
ಸಾವಧಾನವ ಮಾಡಲಾಗದು
ಶ್ರೀವರನೇ ನವವಿಧ ಭಕುತಿ ನೀಡುತ 1
ಅನುಮಾನವ್ಯಾಕೆ | ನೀನೆ ಗತಿ ಎನುವೆನು ಬಲ್ಲಿ
ಅನುದಿನ ಸೇವಿಪೆ ಅನಘನೆ | ಎನ್ನಘ ಗಣನೆ ಮಾಡದೆ ಮುನ್ನ
ಅನುವಾಗಿ ಪಾಲಿಸೊ
ಮಾನವೇದ್ಯನೆ ಮನದಿ ನಿರ
ತನುದಿನದಿ ನಿನ್ನಯ ಧ್ಯಾನವಿತ್ತು
ಮನೋವಿಷಾದವನಳಿಯೆ ನಿನ್ನನು
ಮರೆಯೆನುಪಕೃತಿ ಸತತ ಸ್ಮರಿಸುವೆ 2
ಶ್ರೀ ನರಹರಿಯೆ ಭಕುತಜನ | ವನಜದಿನಮಣಿಯೆ
ಸಾನುರಾಗದಿ ಕೇಳ್ವೆ | ಹನುಮನ ಮತದಲ್ಲಿ
ಅನುಚಾದ ಜ್ಞಾನವ | ಕನಸಿನಲಿ ಮನಸಿನಲಿ
ಜನನಿ ಜನಕ ತನುಜೆ ವನಿತೆಯಾ
ತನುವಿನಲಿ ನೆಲೆಸಿರುವ ಭ್ರಾಂತಿಯ
ಹೀನಗೈಸಿ ಮನೋಭಿಲಾಷೆಯ
ಕೊನೆಗಾಣ್ಸುವ ಭಾರ ನಿನ್ನದು 3
***