Showing posts with label ಯಲಗೂರೇಶ ಇವನು ಏಳೂರಿಗೆಲ್ಲ ಎಲಗೂರಪುರವಾಸ janhavi vittala. Show all posts
Showing posts with label ಯಲಗೂರೇಶ ಇವನು ಏಳೂರಿಗೆಲ್ಲ ಎಲಗೂರಪುರವಾಸ janhavi vittala. Show all posts

Friday, 27 December 2019

ಯಲಗೂರೇಶ ಇವನು ಏಳೂರಿಗೆಲ್ಲ ಎಲಗೂರಪುರವಾಸ ankita janhavi vittala

ಎಲಗೂರೇಶ ಇವನು ಏಳೂರಿಗೆಲ್ಲ |
ಎಲಗೂರಪುರವಾಸ ಇವನ ನಿವಾಸ ||
ಎಲಗೂರೇಶ ಇವನು ಏಳೂರಿಗೆಲ್ಲ || ( 1 )

ದೊಡ್ಡ ಪಾದರಕ್ಷೆ ಇವನಿಗಂತೆ |
ಏಳೂರೆಲ್ಲ ಸುತ್ತವನಂತೆ |
ಇವನೆ ನಮ್ಮನು ಕಾಯುವನಂತೆ |
ಏಳೂರಗೊಬ್ಬ ಒಡೆಯ ಈ ನಮ್ಮ ಹನುಮ ||
ಎಲಗೂರೇಶ ಇವನು ಏಳೂರಿಗೆಲ್ಲ || ( 1 )

ವರ್ಷಕ್ಕೊಮ್ಮೆ ನಡೆಯುವ ಕಾರ್ತಿಕವಂತೆ |
ಎಲ್ಲಿಂದೆಲ್ಲೋ ಬರುವ ಭಕ್ತಜನವಂತೆ |
ಸಂಬ್ರಮದಿ ದೀಪ ಬೆಳಗುವರಂತೆ |
ಈ ದಿವ್ಯ ದೃಶ್ಯ ನೋಡಲು ಕಣ್ಣು ಸಾಲದಂತೆ ||
ಎಲಗೂರೇಶ ಇವನು ಏಳೂರಿಗೆಲ್ಲ ( 2 )

ಸುರ ನರರು ಇವನನು ಭಜಿಸುವರಂತೆ |
ಮುಖ್ಯಪ್ರಾಣನು ಇವನು ಅಹುದಂತೆ |
ಬಲಭೀಮ ಬಲವಾನ ನಮ್ಮ ಹನುಮ |
ಜಾಹ್ನವಿ ವಿಠ್ಠಲನ ಪರಮ ಪ್ರಿಯ ||
ಎಲಗೂರೇಶ ಇವನು ಏಳೂರಿಗೆಲ್ಲ ( 3 )
*********