ಎಷ್ಟು ಜಾಣಳೆ ಸುಭದ್ರಾ ಎಷ್ಟು ಜಾಣಳೆ ನಷ್ಟ ಮಾತು ನಿನ್ನದುನಾವು ಅಷ್ಟು ತಾಳಿಕೊಂಡೆವಲ್ಲ ಪ.
ಮಾನ್ಯ ಮಾನ್ಯರೊಳಗೆ ನೀನು ಕನಿ ರುಕ್ಮಿಣಿಗೆಧಿಕವಾಗಿಎನ್ನ ಹೀನ ನುಡಿದು ಹರಿಯ ನೀಬೆನ್ನ ಬಿದ್ದು ಬಂದುಕುಳಿತೆ1
ಎಲ್ಲ ಜನರೊಳು ಎನಗೆ ಹೊಲ್ಲಮಾತಾಡಿ ಬಹಳೆಫುಲ್ಲನಾಭನ ಬದಿಲೆ ಬಂದು ಫುಲ್ಲ ಮಲ್ಲಿಗಿ ಹಾಂಗಕುಳಿತೆ2
ಅಷ್ಟು ಜನರೊಳಗೆ ಎನಗೆ ನಿಷ್ಠುರವಾಡಿ ಬಹಳ ಕೃಷ್ಣರಾಯರ ಬದಿಲೆ ನೀನುಶ್ರೇಷ್ಠಳಾಗಿ ಬಂದು ಕುಳಿತಿ 3
ನೋಡ ಬಂದ ಜನರೊಳಗೆ ಆಡಿಕೊಂಡಿ ಅಕ್ಕನ ಬಹಳ ಮೂಡಲಗಿರಿವಾಸಗೆ ಮಾರಿ ಬಾಡಧಾಂಗೆ ತೋರಿಕೊಂಡಿ 4
ಮಾನ ಬಿಟ್ಟು ಮಂದಿಯೊಳಗೆ ನಾನಾ ಮಾತು ಎನಗೆ ಆಡದಿನೀನು ರಾಮೇಶನಂಫ್ರಿಯಲಿಮೌನ ದಿಂದ ಬಂದು ಕುಳಿತಿ 5
****